ಚಾಮರಾಜನಗರದ ಜೆ.ಎಚ್.ಪಾಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು. ಡಾ.ಅಶ್ವಿನಿ, ಡಾ.ರೇಣುಕಾದೇವಿ, ಮಹಾದೇವಸ್ವಾಮಿ, ಶಿವಕುಮಾರಯ್ಯ, ಭರತ್ ಭೂಷಣ್ ಇನ್ನಿತರರಿದ್ದರು.
- ಶಾಸಕ ಸಿ.ಪುಟ್ಟರಂಗಶೆಟ್ಟಿ ಸಲಹೆ
- ಮಹಿಳಾ ದಿನಾಚರಣೆ ಹಾಗೂ ಸಾವಿತ್ರಿ ಬಾುಲೆ ಜಯಂತಿ
- ತಾಲೂಕಿನ 30 ಉತ್ತಮ ಶಿಕ್ಷಕಿಯರಿಗೆ ಸನ್ಮಾನ
ಚಾಮರಾಜನಗರದ ಜೆ.ಎಚ್.ಪಾಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 30 ಶಿಕ್ಷಕಿಯರಿಗೆ ಮಾತೆ ಸಾವಿತ್ರಿಬಾಯಿ ಪುಲೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಿ.ಪುಟ್ಟರಂಗಶೆಟ್ಟಿ, ಡಾ.ಅಶ್ವಿನಿ, ಡಾ.ರೇಣುಕಾದೇವಿ, ಮಹಾದೇವಸ್ವಾಮಿ, ಶಿವಕುಮಾರಯ್ಯ, ಭರತ್ ಭೂಷಣ್ ಇನ್ನಿತರರಿದ್ದರು.
ಚಾಮರಾಜನಗರ: ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾುಲೆ ಅವರು ಮಹಿಳೆಯರಿಗೆ ಪ್ರೇರಣೆಯಾಗಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಜೆ.ಎಚ್.ಪಾಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಚಾಮರಾಜನಗರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಜಿಲ್ಲಾ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಸಾವಿತ್ರಿಬಾಯಿ ಪುಲೆ ಜಯಂತಿ ಹಾಗೂ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಮಹಿಳೆಯರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದು, ಸಾವಿತ್ರಿಬಾ ಫುಲೆ, ಡಾ.ಬಿ.ಆರ್.ಅಂಬೇಡ್ಕರ್ ಅವರಂಥವರು ಪ್ರೇರಣೆಯಾಗಬೇಕು. ಅಂದಿನ ಕಷ್ಟದ ಪರಿಸ್ಥಿತಿಯಲ್ಲೇ ಸಾವಿತ್ರಿಬಾುಲೆ ಅವರು ಶಿಕ್ಷಣ ನೀಡಲು ಮುಂದಾಗಿದ್ದರು. ಇಂದು ಸಾವಿರಾರು ಶಿಕ್ಷಕಿಯರಿದ್ದು ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರೆಯಲು ತಾವು ಬದ್ಧತೆಯಿಂದ ಪರಿಣಾಮಕಾರಿಯಾಗಿ ಬೋಧನೆ ನೀಡಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಅಶ್ವಿನಿ ಮಾತನಾಡಿ, ಮಹಿಳೆ ಆಬಲೆಯಲ್ಲ ಮಹಿಳೆ ಎಂದರೆ ಒಂದು ಶಕ್ತಿ ಮಹಿಳೆ ಒಂದು ಕುಟುಂಬವನ್ನು ಮುನ್ನೆಡೆಸಬಲ್ಲಳು ಅಷ್ಟೇ ಅಲ್ಲ ಇಂದು ದೇಶವನ್ನು ಕಟ್ಟಿ ಮುನ್ನಡೆಸಬಲ್ಲಳು, ಪ್ರಾಥಮಿಕ ಶಿಕ್ಷಣ ಗಟ್ಟಿಯಾದರೆ ಮಾತ್ರ ಶಿಕ್ಷಣದ ಗಟ್ಟಿತನ ಉಳಿಯುವುದು ಎಂದು ತಿಳಿಸಿದರು.
ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಮಾತನಾಡಿ, ಶಿಕ್ಷಕರ ಸಂಘವು ಪ್ರತಿ ವರ್ಷವೂ ಸಾವಿತ್ರಿಬಾಫುಲೆ ಹಾಗೂ ಮಹಿಳಾ ದಿನಾಚರಣೆಯನ್ನು ಸಂಘಟಿಸಿ ಉತ್ತಮ ಮಹಿಳಾ ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಸಂಘವು ಶಿಕ್ಷಕರ ಸಮಸ್ಯೆಗಳಿಗೆ ಸದಾ ಧ್ವನಿಯಾಗಿ ನಿಲ್ಲಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷೆ ಡಾ.ರೇಣುಕಾದೇವಿ, ಕಾರ್ಯದರ್ಶಿ ಭರತ್ ಭೂಷಣ್, ಖಜಾಂಚಿ ಶಿವಕುಮಾರಯ್ಯ, ಹಿರಿಯ ಉಪಾಧ್ಯಕ್ಷ ಎಂ.ಡಿ.ಮಹದೇವಯ್ಯ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಕಾರ್ಯದರ್ಶಿ ಎನ್.ಸುಧಾ, ಪದಾಧಿಕಾರಿಗಳಾದ ಬಿ.ಕೃಷ್ಣಮೂರ್ತಿ, ಸವಿತಾ ರಾಣಿ, ರಾಜು, ಧನಂಜಯ, ಶಿವಕುಮಾರ್, ಸಮಿವುಲ್ಲಾ, ರಾಜು , ಶಬಾನಾ, ಅಂಜುಮ್, ಸಾವಿತ್ರಿಬಾಯಿ ಪುಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಭವಾನಿದೇವಿ, ಕಾರ್ಯದರ್ಶಿ ಸುಶೀಲಾ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಮೂರ್ತಿ, ಕಾರ್ಯದರ್ಶಿ ಶಿವನಂಜಯ,್ಯ ಸೋಮಶೇಖರ್ ಇನ್ನಿತರರಿದ್ದರು.