ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ವನಿತೋತ್ಸವ ಕಾರ್ಯಕ್ರಮವನ್ನು ಇಬ್ರಾಹಿಂ ಉದ್ಘಾಟಿಸಿದರು. ಮದನಕುಮಾರ್, ಲಕ್ಷ್ಮೀ, ನೇತ್ರಾವತಿ, ಜ್ಯೋತಿ ಇದ್ದರು.
ಗುಂಡ್ಲುಪೇಟೆ: ಸಾಂಸ್ಕೃತಿಕ ಸಮಿತಿ, ಮಹಿಳಾ ದೌರ್ಜನ್ಯ ತಡೆ ಸಮಿತಿ, ಐಕ್ಯೂಎಸಿ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಷನ್ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವನಿತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಜೀಂ ಪ್ರೇಮ್ ಜಿ ಫೌಂಡೇಷನ್‌ನ ಸಂಯೋಜನಾಧಿಕಾರಿ ಇಬ್ರಾಹಿಂ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಲಿಂಗ ತಾರತಮ್ಯ, ಲಿಂಗಾಧರಿತ ವೃತ್ತಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಇಂತಹ ಬದಲಾವಣೆಗಳಿಗೆ ನಾವೆಲ್ಲರೂ ಕೈಜೋಡಿಸಿ ಸಹಕರಿಸಬೇಕು ಎಂದರು.
ಪೊಲೀಸ್ ಉಪ ನಿರೀಕ್ಷಕಿ ನೇತ್ರಾವತಿ ಮಾತನಾಡಿ, ಬಡತನ ನಮ್ಮ ಬೆಳೆವಣಿಗೆಗೆ ಅಡ್ಡಿಯಾಗಬಾರದು. ಗ್ರಾಮೀಣ ವಿದ್ಯಾರ್ಥಿಗಳು ದೊರೆತ ಸದಾವಕಾಶಗಳನ್ನು ಬಳಸಿಕೊಂಡು ಉತ್ತಮ ಪ್ರಯತ್ನದ ಮೂಲಕ ಒಳ್ಳೆಯ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ಹುರಿದುಂಬಿಸಿದರು.
ಕಾಲೇಜು ಪ್ರಾಂಶುಪಾಲ ಎ.ಆರ್.ಮದನಕುಮಾರ್, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಲಕ್ಷ್ಮೀ, ಮಹಿಳಾ ದೌರ್ಜನ್ಯ ತಡೆ ಸಮಿತಿ ಸಂಚಾಲಕಿ ಡಾ.ಜ್ಯೋತಿ, ಐಕ್ಯೂಎಸಿ ಸಂಚಾಲಕ ವಿಜಯ್‌ಕುಮಾರ್, ರಾ.ಸೇ.ಯೋ ಘಟಕಗಳ ಸಂಚಾಲಕಿ ಕವಿತಾ, ಅಜೀಂ ಪ್ರೇಮ್ ಜಿ ಫೌಂಡೇಷನ್‌ನ ರುಕ್ಮಿಣಿ, ಪ್ರದೀಪ್ ಇತರರಿದ್ದರು.