ಕೊಳ್ಳೇಗಾಲದ ನಿಸರ್ಗ ವಿದ್ಯಾನಿಕೇತನ ಶಾಲೆಯಲ್ಲಿ ಸೋಮವಾರ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಟಿ.ಸಿ.ಶ್ರೀಕಾಂತ್, ಎಂ.ರಂಜಿತ್ ಕುಮಾರ್, ನಿರ್ಮಲಾ ಮಧುಸೂದನ್, ಕೆಂಪಯ್ಯ, ಸಿ.ಚಿನ್ನ ರಾಜು, ಎ.ಪಿ.ದಿನೇಶ್ ಕುಮಾರ್, ನಯನಾ ಕ್ಲಾರಿಬಲ್ ಇದ್ದರು.
- ನಿಸರ್ಗ ವಿದ್ಯಾನಿಕೇತನ ಶಾಲೆ
- ರಾಷ್ಟ್ರೀಯ ಯುವ ದಿನ
- ತಾಲೂಕು ಕಾನೂನು ಸೇವೆಗಳ ಸಮಿತಿ
ಕೊಳ್ಳೇಗಾಲ: ತಾಲೂಕು ಕಾನೂನು ಸೇವೆಗಳ ಸಮಿತಿ, ಪೊಲೀಸ್ ಇಲಾಖೆ, ವಕೀಲರ ಸಂಘ, ಅಭಿಯೋಜನೆ ಇಲಾಖೆ, ಮಾನಸ ಶಿಕ್ಷಣ ಸಂಸ್ಥೆ, ಸಹಯೋಗದಲ್ಲಿ ಪಟ್ಟಣದ ನಿಸರ್ಗ ವಿದ್ಯಾನಿಕೇತನ ಶಾಲೆಯಲ್ಲಿ ಸೋಮವಾರ ರಾಷ್ಟ್ರೀಯ ಯುವ ದಿನ ಮತ್ತು ರಾಷ್ಟ್ರೀಯ ರಸ್ತೆ ಸುರಕ್ಷಿತಾ ಮಾಸಾಚಾರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್, ಸಮಾಜದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಪ್ರಮುಖವಾಗಿರುತ್ತದೆ. ಪ್ರತಿಯೊಬ್ಬರೂ ರಸ್ತೆ ಸುರಕ್ಷಿತ ನಿಯಮ ಪಾಲಿಸುವುದರ ಜತೆಗೆ ಕಾನೂನಿನ ಬಗ್ಗೆ ಅರಿವು ಪಡೆಯುವಂತಾಗಬೇಕು ಎಂದು ತಿಳಿಸಿದರು.
ಹಿರಿಯ ವಕೀಲೆ ನಿರ್ಮಲಾ ಮಧುಸೂದನ್ ಮಾತನಾಡಿ, ಗುರಿ ಸಾಧನೆಗೆ ಏಕಾಗ್ರತೆ ಇರಬೇಕು. ಅನಗತ್ಯ ವಿಚಾರಗಳ ಬಗ್ಗೆ ಯೋಚನೆ ಮಾಡದೆ ಯುವ ಜನತೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ತಮ್ಮ ಕರ್ತವ್ಯದ ಬಗ್ಗೆ ಅರಿವು ಹೊಂದುವುದರ ಜತೆಗೆ ಹಿರಿಯರ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ಎಂ.ರಂಜಿತ್ ಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ಕೆಂಪಯ್ಯ, ವಕೀಲ ಸಿ.ಚಿನ್ನರಾಜು, ಮಾನಸ ಶಿಕ್ಷಣ ಸಂಸ್ಥೆಯ ವಿಶೇಷಾಧಿಕಾರಿ ಎ.ಪಿ.ದಿನೇಶ್ ಕುಮಾರ್, ಸಂಯೋಜನಾಧಿಕಾರಿ ಚೆನ್ನಶೆಟ್ಟಿ, ನಿಸರ್ಗ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲೆ ನಯನಾ ಕ್ಲಾರಿಬಲ್, ಮುಖ್ಯ ಶಿಕ್ಷಕ ಶಂಕರ್, ಕೆ.ಅನಿತಾ ಇತರರಿದ್ದರು.