ಗುಂಡ್ಲುಪೇಟೆ ಪಟ್ಟಣದ ಟೌನ್ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ್, ಉಪಾಧ್ಯಕ್ಷ ಹೊನ್ನಪ್ಪ ಅವರನ್ನು ಗಣೇಶ್ ಪ್ರಸಾದ್ ಅಭಿನಂದಿಸಿದರು. ನಂಜುಂಡಪ್ರಸಾದ್, ಎಚ್.ಎಸ್.ನಂಜಪ್ಪ, ಎಚ್.ಎನ್.ಬಸವರಾಜು, ರಘು, ಶಿವಣ್ಣ, ಚಂದ್ರಶೇಖರ್, ಭಾಗ್ಯಮ್ಮ, ಚಿಕ್ಕಣ್ಣ ಇದ್ದರು.
- ಶಾಸಕ ಎಚ್.ಎಂ.ಗಣೇಶ್ ಪ್ರಸಾದ್
- ಟೌನ್ ಕೃಷಿ ಪತ್ತಿನ ಸಹಕಾರ ಸಂಘ
ಗುಂಡ್ಲುಪೇಟೆ: ಬ್ಯಾಂಕ್‌ನಿಂದ ಸಾಲ ಪಡೆದವರು ಸಕಾಲದಲ್ಲಿ ಸಾಲ ವಾಪಸ್ ಮಾಡುವ ಮೂಲಕ ಬ್ಯಾಂಕ್‌ನ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮನವಿ ಮಾಡಿದರು.
ಪಟ್ಟಣದ ಟೌನ್ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೋಮವಾರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ್, ಉಪಾಧ್ಯಕ್ಷ ಹೊನ್ನಪ್ಪ ಅವರನ್ನು ಅಭಿನಂದಿಸಿ ಮಾತನಾಡಿದರು. ತಾವೂ ಸಹಾ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರಾಗಿದ್ದು, ಸಹಕಾರ ಸಂಘಗಳ ಅಭಿವೃದ್ಧಿಗೆ ಅನುದಾನ ಕೊಡಿಸಲಾಗುವುದು. ನನ್ನ ವ್ಯಾಪ್ತಿಗೆ 30ಕ್ಕೂ ಹೆಚ್ಚಿನ ಸಹಕಾರ ಸಂಘಗಳು ಬರುತ್ತವೆ. ಅವುಗಳಲ್ಲಿ ಸಾಲಪಡೆದವರು ಸಕಾಲದಲ್ಲಿ ಮರುಪಾವತಿಸಿದರೆ ಮಾತ್ರ ಹೊಸದಾಗಿ ಸಾಲ ನೀಡಲಾಗುತ್ತದೆ ಎಂದರು.
ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ನಿರ್ದೇಶಕರಾದ ರಘು, ಶಿವಣ್ಣ, ಚಂದ್ರಶೇಖರ್, ಭಾಗ್ಯಮ್ಮ, ಚಿಕ್ಕಣ್ಣ, ಮುಖಂಡರಾದ ಬಸವರಾಜು, ಶಾಂತಾರಾಮ್, ಅಲ್ಲಾಹು ಸೇರಿದಂತೆ ಹಲವರು ಇದ್ದರು.