ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಗ್ರಾಮದ ನಾಗಪ್ಪ ಅವರ ಜಮೀನಿನಲ್ಲಿ ಕಾಣಿಸಿಕೊಂಡ ಚಿರತೆ ಮರಿಗಳು.
ಗುಂಡ್ಲುಪೇಟೆ: ತಾಲೂಕಿನ ವಡ್ಡಗೆರೆ ಗ್ರಾಮದ ಜಮೀನೊಂದರ ಕೃಷಿಹೊಂಡಕ್ಕೆ ಅಳವಡಿಸಿದ್ದ ಪೈಪ್‌ನಲ್ಲಿ ಇದ್ದ ಚಿರತೆ ಮರಿಯನ್ನು ರೈತರು ಅರಣ್ಯ ಇಲಾಖೆ ವಶಕ್ಕೆ ನೀಡಿದ್ದಾರೆ.
ಗ್ರಾಮದ ವಿ.ಆರ್.ನಾಗಪ್ಪ ಅವರ ಜಮೀನಿನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಎರಡು ಚಿರತೆಯ ಮರಿಗಳು ಓಡಿ ಬಂದಿದ್ದು, ಕೃಷಿ ಹೊಂಡಕ್ಕೆ ಅಳವಡಿಸಿದ್ದ ಸಿಮೆಂಟ್ ಪೈಪ್‌ನೊಳಗೆ ನುಗ್ಗಿವೆ. ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ ಕಾರ್ಮಿಕರು, ಪೈಪ್ ಸಮೀಪ ಬರುತ್ತಿದ್ದಂತೆ ಒಂದು ಮರಿ ಓಡಿಹೋಗಿದೆ. ಬಳಿಕ ಮತ್ತೊಂದು ಮರಿಯನ್ನು ರೈತರು ಅರಣ್ಯ ಇಲಾಖೆ ವಶಕ್ಕೆ ನೀಡಿದರು.