ಗುಂಡ್ಲುಪೇಟೆ ತಾಲೂಕು ಕಚೇರಿ ಸಭಾಂಗಣದಲ್ಲಿ ಎಂ.ಎಸ್.ತನ್ಮಯಿ ಅಧ್ಯಕ್ಷತೆಯಲ್ಲಿ ಎಸ್‌ಸಿ/ಎಸ್‌ಟಿ ವರ್ಗಗಳ ಹಿತರಕ್ಷಣಾ ಸಮಿತಿ ಸಭೆ ನಡೆಯಿತು. ಷಣ್ಮುಗಂ, ಶರವಣ. ಮೋಹನ್ ಕುಮಾರ್ ಇದ್ದರು. 
ಚಾಮರಾಜನಗರ

ಅಧಿಕಾರಿಗಳ ಗೈರಿಗೆ ಮುಖಂಡರ ಆಕ್ರೋಶ

ಗುಂಡ್ಲುಪೇಟೆ: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಎಸ್ಸಿ, ಎಸ್ಟಿ ಹಿತರಕ್ಷಣಾ ಸಭೆಗೆ ನಾನಾ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದು ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು.
ತಹಸೀಲ್ದಾರ್ ಎಂ.ಎಸ್.ತನ್ಮಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಆರು ಇಲಾಖೆ ಅಧಿಕಾರಿಗಳು ಭಾಗಿಯಾಗಿಲ್ಲ. ಅಧಿಕಾರಿಗಳು ಎಸ್ಸಿ/ಎಸ್ಟಿ ಸಭೆಗೆ ಅಗೌರವ ತೋರಿದ್ದು ನೋಟಿಸ್ ನೀಡುವ ವಿಚಾರ ಕೇಳಿ ಕೇಳಿ ಸಾಕಾಗಿದೆ. ಈ ಬಾರಿ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್‌ಗೆ ಒತ್ತಾಯಿಸಿದರು. ಮೇಲಧಿಕಾರಿಗಳ ಜತೆ ಚರ್ಚಿಸಿ ಕ್ರಮಕ್ಕೆ ಮುಂದಾಗುತ್ತೇನೆ ಎಂದು ತಹಸೀಲ್ದಾರ್ ತಿಳಿಸಿದರು.
ಸಭೆಗೆ ಗೈರಾಗುತ್ತಿರುವ ಅಧಿಕಾರಿಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು. ಸಮಿತಿಗೆ ಮೂರು ವರ್ಷದ ನಂತರ ಸದಸ್ಯರು ಬದಲಾಗಬೇಕು. ಜಾಗೃತಿ ಸಮಿತಿ ಸಭೆ ನಡೆಸಿ ಎಸ್ಸಿಪಿ, ಟಿಎಸ್ಪಿ ಅನುದಾನದ ಬಗ್ಗೆ ಮಾಹಿತಿ ನೀಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.
ವಕೀಲ ರಾಜೇಶ್ ಮಾತನಾಡಿ, ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಕಚೇರಿ ತೆರೆಯಲು ಸಾಲ ಸೌಲಭ್ಯ ಕ್ಕೆ ಅರ್ಜಿ ಹಾಕಿ ಎರಡು ವರ್ಷವಾಯಿತು. ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೂ ನೀಡಿಲ್ಲ. ನಮ್ಮಂತಹವರಿಗೆ ಹೀಗೆ ಮಾಡಿದರೆ ಸಾಮಾನ್ಯ ಜನರ ಕಥೆ ಏನು ಎಂದು ಬೇಸರ ಹೊರಹಾಕಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ತಾಲೂಕು ಪಂಚಾಯಿತಿ ಇಒ ಷಣ್ಮುಗಂ, ಪುರಸಭೆ ಮುಖ್ಯಾಧಿಕಾರಿ ಶರವಣ, ಮುಖಂಡರಾದ ಮಾಡ್ರಹಳ್ಳಿ ಸುಭಾಷ್, ಸೋಮಣ್ಣ, ಉಲ್ಲಾಸ್, ಮುತ್ತಣ್ಣ, ಕಾಂತರಾಜ್, ರಾಜೇಶ್, ರಂಗಸ್ವಾಮಿ, ನಂಜುಂಡಸ್ವಾಮಿ, ನಾಗೇಂದ್ರ, ಗೋವಿಂದರಾಜು, ಪಾಪಣ್ಣ, ಸುರೇಶ್ ನಾಯಕ್, ಕುಮಾರ್ ಮತ್ತಿತರರಿದ್ದರು.