ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಕಡಿತಗೊಳಿಸಿರುವ ಸರ್ಕಾರ ಆದೇಶವನ್ನು ಖಂಡಿಸಿ ಪಟ್ಟಣದಲ್ಲಿ ಮಂಗಳವಾರ ತಾಲೂಕು ನಾಯಕರ ಸಂಘ ಮತ್ತು ನಾಯಕ ಜನಾಂಗದ ಗಡಿಮನೆ, ಕಟ್ಟೆ ಮನೆ ಮತ್ತು ಕಸಬಾ ಮನೆಯ ಯಜಮಾನರು ಮತ್ತು ಕುಲಸ್ಥರು ಬೃಹತ್ ಪ್ರತಿಭಟನೆ ನಡೆಸಿದರು. 
ಚಾಮರಾಜನಗರ

ಮೀಸಲಾತಿ ಕಡಿತಕ್ಕೆ ನಾಯಕರ ಸಂಘ ಖಂಡನೆ

ಪ್ರಮುಖ ಮುಖ್ಯಾಂಶಗಳು

  • reservation
ಕೊಳ್ಳೇಗಾಲ: ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಯನ್ನು ಕಡಿತಗೊಳಿಸಿರುವ ಸರ್ಕಾರದ ಆದೇಶ ಖಂಡಿಸಿ ಪಟ್ಟಣದಲ್ಲಿ ಮಂಗಳವಾರ ತಾಲೂಕು ನಾಯಕರ ಸಂಘ ಮತ್ತು ನಾಯಕ ಜನಾಂಗದ ಗಡಿಮನೆ, ಕಟ್ಟೆ ಮನೆ ಮತ್ತು ಕಸಬಾ ಮನೆಯ ಯಜಮಾನರು ಮತ್ತು ಕುಲಸ್ಥರು ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ನಾಯಕರ ದೊಡ್ಡ ಬೀದಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನಾಯಕರ ಚಿಕ್ಕ ಬೀದಿ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ಸಾಗಿ ತಾಲೂಕು ಕಚೇರಿಗೆ ತೆರಳಿತು. ಬಳಿಕ ಶಿರಸ್ತೇದಾರ್ ಕೃಪಾಕರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮುಖಂಡ ಜಯಸುಂದರ್ ಮಾತನಾಡಿ, ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರು ಎಸ್ಸಿ-ಎಸ್ಟಿಗಳ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ 257 ದಿನಗಳ ಕಾಲ ಹೋರಾಟ ಮಾಡಿದ ಫಲವಾಗಿ ಹಿಂದಿನ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಪರಿಶಿಷ್ಟ ಜಾತಿಗಿದ್ದ ಶೇ.15 ರಷ್ಟು ಮೀಸಲಾತಿಯನ್ನು ಶೇ.17ಕ್ಕೆ ಹೆಚ್ಚಳ ಮಾಡಿತು. ಪರಿಶಿಷ್ಟ ಪಂಗಡಕ್ಕಿದ್ದ ಶೇ.3 ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಲಾಯಿತು. ಇದರಿಂದ ರಾಜ್ಯದಲ್ಲಿರುವ ಶೇ.50ರಷ್ಟು ಮೀಸಲಾತಿ ಶೇ.56 ಕ್ಕೆ ಏರಿಕೆ ಕಂಡಿದೆ. ಇದೀಗ ರಾಜ್ಯ ಸರ್ಕಾರ 56,474 ಹುದ್ದೆಗಳ ನೇಮಕಾತಿಯನ್ನು ಭರ್ತಿ ಮಾಡುವುದಾಗಿ ಅಧಿಸೂಚನೆ ಹೊರಡಿಸಿದ್ದು. ಈ ನೇಮಕಾತಿ ಪ್ರಕ್ರಿಯೆಯನ್ನು ಶೇ.56 ರಷ್ಟು ಮೀಸಲಾತಿಯೊಳಗೆ ಭರ್ತಿ ಮಾಡುವ ಬದಲಿಗೆ ಶೇ.50 ಮೀಸಲಾತಿಯೊಳಗೆ ನಡೆಸುವುದಾಗಿ ಹೊರಟಿದೆ. ಶೇ.56ರಷ್ಟು ಮೀಸಲಾತಿ ಅಡಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಬೇಕು ಎಂದರು.
ಜಿಪಂ ಮಾಜಿ ಸದಸ್ಯ ಕೊಪ್ಪಳಿನಾಯಕ ಮಾತನಾದರು. ನಾಯಕ ಜನಾಂಗದ ಯಜಮಾನರಾದ ಪ್ರಸಾದ್, ಮೂರ್ತಿ, ವೆಂಕಟಾಚಲ, ಗವಿರಾಯ ನಾಯಕ, ಸೀಗನಾಯಕ, ಶಿವಪ್ರಸಾದ್ ನಾಯಕ, ದುಂಡು ಮಾದನಾಯಕ, ವಿಶ್ವಮೂರ್ತಿ ನಾಯಕ, ಸೀಗನಾಯಕ, ಚಿಕ್ಕಮಾದನಾಯಕ, ಸುರೇಂದ್ರ, ಮಹದೇವ, ನಾಗರಾಜು, ವೆಂಕಟರಮಣ, ಗೋವಿಂದರಾಜು, ಈಶ್ವರ್, ಸುಂದರ್ ನಾಯಕ, ತಾಲೂಕು ನಾಯಕ ಸಂಘದ ಅಧ್ಯಕ್ಷ ಜಗದೀಶ್ ನಾಯಕ, ಉಪಾಧ್ಯಕ್ಷ ಮಹದೇವ ನಾಯಕ, ನಿರ್ದೇಶಕರಾದ ಕುನ್ನನಾಯಕ, ನಿಂಗನಾಯಕ, ಮುಡಿಗುಂಡ ನಟರಾಜು, ಪಾಳ್ಯ ಕೃಷ್ಣ ಇತರರು ಇದ್ದರು.