ಗುಂಡ್ಲುಪೇಟೆಯಲ್ಲಿ ಟಿಪ್ಪರ್‌ಗಳ ಹಾವಳಿಗೆ ಕಡಿವಾಣ ಹಾಕುವಂತೆ ವಕೀಲರು ಬುಧವಾರ ಪ್ರತಿಭಟನೆ ನಡೆಸಿ ಉಪತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಗುಂಡ್ಲುಪೇಟೆ: ನಿರಂತರ ಅಪಘಾತಗಳಿಗೆ ಕಾರಣವಾಗಿರುವ ಟಿಪ್ಪರ್‌ಗಳ ಹಾವಳಿ ತಡೆಯುವಂತೆ ಒತ್ತಾಯಿಸಿ ವಕೀಲರು ಬುಧವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಮುಂದೆ ಸಮಾವೇಶಗೊಂಡ ವಕೀಲರು, ಟಿಪ್ಪರ್ ಮಾಲೀಕರು ಮತ್ತು ಚಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಟಿಪ್ಪರ್‌ಗಳಿಗೆ ಸೂಕ್ತ ದಾಖಲೆಗಳು, ವಿಮೆ, ಎಫ್‌ಸಿ, ಪರ್ಮಿಟ್ ಇತರ ಯಾವುದೇ ದಾಖಲೆಗಳಿದಿದ್ದರೂ ಹಗಲಿರುಳು ಓಡಾಡುತ್ತಿವೆ. ಚಾಲಕರು ಮದ್ಯಪಾನ ಮಾಡಿ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣವಾಗುತ್ತಿದ್ದಾರೆ. ಇದರಿಂದ ಕಾರು, ಬೈಕ್ ಇತರ ವಾಹನಗಳನ್ನು ಭಯದಲ್ಲಿ ಜೀವ ಕೈಯಲ್ಲಿ ಹಿಡಿದು ಚಲಾಯಿಸಬೇಕಿದೆ. ಮಂಗಳವಾರ ಚಿಕ್ಕತುಪ್ಪೂರು ಗೇಟ್ ಬಳಿ ಸಂಭವಿಸಿದ ಅಪಘಾತದಲ್ಲಿ 7 ಶಾಲಾ ಮಕ್ಕಳು ಗಾಯಗೊಂಡರು. ಮಾದಾಪಟ್ಟಣ ಗೇಟ್, ಬಸವಭವನ ಸೇರಿ ಹಲವೆಡೆ ನಡೆದ ಅಪಘಾತಗಳನ್ನು ಹತ್ತಾರು ಮಂದಿ ಜೀವಬಿಟ್ಟಿದ್ದಾರೆ. ಟಿಪ್ಪರ್ ಹಾವಳಿ ಬಗ್ಗೆ ಸಾಮಾಜಿಕ ಜಾಲತಾಣ ಸೇರಿ ಎಲ್ಲ ಕಡೆಗಳಲ್ಲೂ ಚರ್ಚೆಯಾಗುತ್ತಿದೆ. ರಸ್ತೆಗಳೆಲ್ಲ ಸಂಪೂರ್ಣ ಹಾಳಾಗಿವೆ. ಆದ್ದರಿಂದ ಕೂಡಲೇ ಟಿಪ್ಪರ್‌ಗಳ ಹಾವಳಿ ತಡೆಗಟ್ಟಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನು ಉಪತಹಸೀಲ್ದಾರ್ ಜಯಪ್ರಕಾಶ್‌ಗೆ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್, ಮಾಜಿ ಅಧ್ಯಕ್ಷರಾದ ಬಿ.ಶಿವಣ್ಣ, ಎಚ್.ವಿ.ರವಿಕಾಂತ್, ಕಾರ್ಯದರ್ಶಿ ಜವರಾಜು, ಜಿ.ಎಸ್.ಮಧುಸೂದನ್, ಸಿದ್ದೇಶ್, ಶಾಂತಮಲ್ಲಪ್ಪ, ಬಂಗಾರನಾಯಕ, ಎಚ್.ಎನ್.ಮಹೇಶ್, ಮಂಜುನಾಥ್, ನಾಗರಾಜು, ಬೀರೇಗೌಡ, ಅರವಿಂದಕುಮಾರ್, ಗಿರೀಶ್, ಪ್ರಸಾದ್, ಪುಟ್ಟಸ್ವಾಮಿ, ಕಾಂತರಾಜು, ಚಿಕ್ಕನಾಯಕ, ರಾಜೇಶ್, ಚಿಕ್ಕನಂಜಯ್ಯ ಇದ್ದರು.