ಚಾಮರಾಜನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಕಾಶ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಭಗವದ್ಗೀತೆಯ ಸಾರ ಹಾಗೂ ಶಿವಶರಣರ ಶಿವಯೋಗ ಪ್ರವಚನ ಕಾರ್ಯಕ್ರಮವನ್ನು ರಾಜಯೋಗಿನಿ ಶಿವಮಣಿಜೀ ಉದ್ಘಾಟಿಸಿದರು. ಮಹದೇವಸ್ವಾಮಿ, ದಾನೇಶ್ವರಿ ಜೀ, ಬಿ.ಕೆ.ಆರಾಧ್ಯ, ಹೊನ್ನಮೇಟ್‌ಇ ಸುಂದ್ರಪ್ಪ, ಅಕ್ಷತಾ ಜೈನ್, ನಾಗರಾಜ್, ಶಿವಸ್ವಾಮಿ, ಪುಟ್ಟಶೇಖರ ಮೂರ್ತಿ, ಶ್ರೀನಿವಾಸ್ ಇತರರು ಇದ್ದರು.
- ಬ್ರಹ್ಮಕುಮಾರಿ ರಾಜಯೋಗಿನಿ ಶಿವಮಣಿಜೀ ಪ್ರವಚನ
- ಭಗವದ್ಗೀತೆ ಸಾರ ಮತ್ತು ಶಿವಶರಣರ ಶಿವಯೋಗ ಕಾರ್ಯಕ್ರಮ
ಚಾಮರಾಜನಗರ: ಸಾವಿನ ಭಯಕ್ಕೆ ಆತ್ಮದ ಜ್ಞಾನದ ಕೊರತೆಯೇ ಮೂಲ ಕಾರಣವೆಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಶಿವಮಣಿಜೀ ಅಭಿಪ್ರಾಯಪಟ್ಟರು.
ನಗರದ ಪ್ರಕಾಶ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಭಗವದ್ಗೀತೆಯ ಸಾರ ಹಾಗೂ ಶಿವಶರಣರ ಶಿವಯೋಗ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವೆಲ್ಲರೂ ಪರಮಾತ್ಮನ ಮಕ್ಕಳು. ಆತ್ಮವು ಶರೀರವನ್ನು ಪಡೆಯುವುದಕ್ಕೆ ಜನ್ಮ ಮತ್ತು ಶರೀರವನ್ನು ಬಿಡುವುದಕ್ಕೆ ಮರಣವೆಂದು ಕರೆಯುತ್ತಾರೆ. ಆತ್ಮವು ತನ್ನ ಶರೀರವೆಂಬ ವಸ್ತ್ರ ಹಳೆಯದಾದಾಗ ಕಳಚುವುದಕ್ಕೆ ಸಾವು ಎಂದು ಹೇಳುತ್ತಾರೆ. ಶರೀರವೆಂಬ ಹೊಸ ವಸ್ತ್ರವನ್ನು ಧರಿಸಿದಾಗ ಜನ್ಮ ಎಂದು ಕರೆಯಲಾಗುತ್ತದೆ ಎಂದರು.
ಆತ್ಮಹತ್ಯೆ ಎಂಬ ಪದದಲ್ಲಿ ಆತ್ಮ ಎಂದೂ ಹತ್ಯೆ ಆಗುವುದಿಲ್ಲ. ಜೀವ ಹತ್ಯೆಯಾಗುತ್ತದೆ. ಆದ್ದರಿಂದ ನಮ್ಮನ್ನು ನಾವು ಶರೀರ ಎಂದು ತಿಳಿದುಕೊಂಡಿರುವರಿಂದ ದುಃಖ ಉಂಟಾಗುತ್ತದೆ. ಆತ್ಮ ಎಂದುಕೊಂಡಾಗ ಸದಾ ಶಾಂತಿ ದೊರೆಯುತ್ತದೆ. ಭಗವದ್ಗೀತೆಯ ಸಾರದಂತೆ ಹಿಂದೆಯೂ ಒಳ್ಳೆಯದಾಗಿತ್ತು. ಈಗಲೂ ಒಳ್ಳೆಯದೇ ಆಗುತ್ತಿದೆ. ಮುಂದೆಯೂ ಬಹಳ ಒಳ್ಳೆಯದೇ ಆಗುತ್ತದೆ ಎಂದರು.
ಬಸವ ಸಮಿತಿ ಕೇಂದ್ರದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಡಬೇಕೇ ಹೊರತು ಹಣವನ್ನು ಶೇಖರಿಸಬಾರದು ಎಂದರು. ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರಿಜೀ ಮಾತನಾಡಿ, ಭಗವದ್ಗೀತೆಯ ಬೋಧನೆ ಒಂದು ವೇಳೆ ದ್ವಾಪರಯುಗದಲ್ಲಿ ನಡೆದಿದ್ದೇ ಆದರೆ ಕಲಿಯುಗ ಬರುವ ಅವಶ್ಯಕತೆ ಇರುತ್ತಿರಲಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿ.ಕೆ ಆರಾಧ್ಯ, ವೇದಮೂರ್ತಿ, ಹೊನ್ನಮೇಟಿ ಸುಂದ್ರಪ್ಪ, ಅಕ್ಷತಾ ಜೈನ್, ನಾಗರಾಜ್, ಶಿವಸ್ವಾಮಿ, ಪುಟ್ಟಶೇಖರ ಮೂರ್ತಿ, ಶ್ರೀನಿವಾಸ್, ಶಿವಕುಮಾರ್, ಗೀತಾ, ಪುಷ್ಪ, ತ್ರಿವೇಣಿ, ಕಮಲ, ಜಯಲಕ್ಷ್ಮಿ, ಶ್ರೀನಿವಾಸ್‌ಮೂರ್ತಿ, ಸಿದ್ದಯ್ಯ ಇತರರು ಹಾಜರಿದ್ದರು.