ಚಿನ್ನದ ಓಲೆ ಇದ್ದ ಬಟ್ಟೆ ಬ್ಯಾಗ್ ಅನ್ನು ಕೊಳ್ಳೇಗಾಲ ಕೆಎಸ್ ಆರ್‌ಟಿಸಿ ಡಿಪೋ ಮ್ಯಾನೇಜರ್ ಭೋಗನಾಯಕ ಜಿ.ಸಿಂಧು ಅವರಿಗೆ ಹಿಂದಿರುಗಿಸಿದರು.
ಕೊಳ್ಳೇಗಾಲ: ಮಹಿಳಾ ಪ್ರಯಾಣಿಕರೊಬ್ಬರು ಬಸ್‌ನಲ್ಲಿ ಕಳೆದುಕೊಂಡಿದ್ದ ಚಿನ್ನದ ಓಲೆಯಿದ್ದ ಬಟ್ಟೆ ಬ್ಯಾಗನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗುರುವಾರ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.
ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಹೋಬಳಿ ಗುಡಿಗೇರೆ ವಿಲೇಜ್‌ನ ಜಿ.ಸಿಂಧು ಏ.8 ರಂದು ರಾತ್ರಿ 10 ಗಂಟೆಯಲ್ಲಿ ಬೆಂಗಳೂರಿನಿಂದ ಕೊಳ್ಳೇಗಾಲ ಮಾರ್ಗವಾಗಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಮದ್ದೂರಿನಲ್ಲಿ ಹತ್ತಿದ್ದಾರೆ. ಮಾರ್ಗಮಧ್ಯೆ ಸಿಗುವ ಕೆ.ಎಂ.ದೊಡ್ಡಿಯಲ್ಲಿ ಬಸ್ ಇಳಿದು ಮನೆಗೆ ತೆರಳಿದಾಗ 8 ಗ್ರಾಂ ಚಿನ್ನದ ಓಲೆ ಇದ್ದ ಬಟ್ಟೆ ಬ್ಯಾಗ್ ಕಳೆದು ಕೊಂಡಿರುವುದು ಗಮನಕ್ಕೆ ಬಂದಿದೆ. ಅಷ್ಟರಾಗಲೇ ಕೊಳ್ಳೇಗಾಲ ಡಿಪೋಗೆ ಬಸ್ ತಲುಪಿದ್ದು ಚಾಲಕ ವೆಂಕಟಾಚಲ ಬ್ಯಾಗ್ ಅನ್ನು ಭದ್ರತಾ ಕೊಠಡಿಯಲ್ಲಿ ಇರಿಸಿದ್ದರು. ಗುರುವಾರ ಡಿಪೋ ಮ್ಯಾನೇಜರ್ ಭೋಗನಾಯಕ, ಭದ್ರತಾ ನೌಕರ ಧರಣೇಶ್ ಅವರು ಬ್ಯಾಗ್‌ನಲ್ಲಿ ದೊರೆತ ಆಧಾರ್ ಕಾರ್ಡ್ ಮೂಲಕ ಸಿಂಧು ಅವರನ್ನು ಸಂಪರ್ಕಿಸಿ ಡಿಪೋಗೆ ಕರೆಸಿ ಟಿಕೆಟ್ ಹಾಗೂ ಆಧಾರ್ ಪ್ರತಿ ಪಡೆದು ಚಿನ್ನದ ಓಲೆ ಇದ್ದ ಬಟ್ಟೆ ಬ್ಯಾಗ್ ಹಿಂದಿರುಗಿಸಿದ್ದಾರೆ.
ಪಾರುಪತ್ತೆದಾರ ಪರಮೇಶ್ವರ್, ಕುಶಲಕರ್ಮಿ ಪಿ.ಚಂದ್ರಶೇಖರ್, ಚಾಲಕ ವೆಂಕಟಾಚಲ ಇದ್ದರು.