ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಸ್ತೆಯಲ್ಲಿರುವ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಬುಧವಾರ ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆ ನಿವಾಸಿಗಳು ಮತ್ತು ಭಕ್ತ ವೃಂದದ ವತಿಯಿಂದ ಲಿಂ. ಶ್ರೀ ಶಿವ ಕುಮಾರ ಸ್ವಾಮೀಜಿ ಜಯಂತಿ ಆಚರಣೆ ಮಾಡಲಾಯಿತು. ಇಂದ್ರಕುಮಾರ್, ಮಲ್ಲೇಶಪ್ಪ, ಕೆ.ಕೆ ದೊಡ್ಡಿ ಬಸವರಾಜು, ಸೋಮಶೇಖರ್, ಶಾಂತರಾಜು, ಪ್ರಕಾಶ್, ಸುಮಾ ಇತರರು ಇದ್ದರು.
ಕೊಳ್ಳೇಗಾಲ : ಪಟ್ಟಣದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಸ್ತೆಯಲ್ಲಿರುವ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಬುಧವಾರ ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆ ನಿವಾಸಿಗಳು ಮತ್ತು ಭಕ್ತ ವೃಂದದ ವತಿಯಿಂದ ಲಿಂ. ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ವರ್ಷದ ಜಯಂತ್ಯುತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು.
ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದ ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಈ ವೇಳೆ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ವೀರಶೈವ ಲಿಂಗಾಯತ ನೌಕರರ ಬಸವ ಸೇವಾ ಸಮಿತಿ ಅಧ್ಯಕ್ಷ ಇಂದ್ರ ಕುಮಾರ್ ಮಾತನಾಡಿದರು.
ಬಸವ ಮನೆ ಟ್ರಸ್ಟ್ ಅಧ್ಯಕ್ಷ ಮಲ್ಲೇಶಪ್ಪ, ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಕೆ.ಕೆ ದೊಡ್ಡಿ ಬಸವರಾಜು, ಬಸವ ಪತ್ತಿನ ಸೇವಾ ಸಹಕಾರ ಸಂಘದ ನಿಕಟ ಪೂರ್ವ ಉಪಾಧ್ಯಕ್ಷ ಸೋಮಶೇಖರ್, ನಗರಸಭೆ ಮಾಜಿ ಸದಸ್ಯ ಶಾಂತರಾಜು, ಪ್ರಕಾಶ್, ಸುಮಸುಬ್ಬಣ್ಣ, ಮಹೇಶ್ ಕೆಂಪನಪಾಳ್ಯ, ನಂದೀಶ್ ಮಾಸ್ಟರ್, ಕೆಸ್ತೂರು ಪ್ರಸಾದ್, ಜಡೇಸ್ವಾಮಿ ಮತ್ತಿತರಿದ್ದರು.