ಂಕ್ರಾಂತಿ ಹಬ್ಬದ ಹಿನ್ನಲೆ ಬುಧವಾರ ಮಾವಿನ ಸೊಪ್ಪಿನ, ಕಟ್ಟುಕಾವಲು ಸೊಪ್ಪನ್ನು ಜನರು ಖರೀದಿ ಮಾಡಿದರು. 
ಚಾಮರಾಜನಗರ

ಕೊಳ್ಳೇಗಾಲದಲ್ಲಿ ಹಬ್ಬದ ಖರೀದಿ

ಎ. ಆರ್. ರಘುರಾಮ
ಕೊಳ್ಳೇಗಾಲ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಬುಧವಾರ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಜೋರಾಗಿತ್ತು.
ಡಾ.ರಾಜ್‌ಕುಮಾರ್ ರಸ್ತೆ, ಡಾ.ಅಂಬೇಡ್ಕರ್ ರಸ್ತೆ ಹಾಗೂ ಚೌಡೇಶ್ವರಿ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಬಟ್ಟೆ ಅಂಗಡಿಗಳು, ದಿನಸಿ ಅಂಗಡಿ, ಹೂವಿನ ಅಂಗಡಿ, ಹಣ್ಣಿನ ಅಂಗಡಿ, ಪೂಜಾ ಸಾಮಗ್ರಿಗಳ ಅಂಗಡಿಗಳಲ್ಲಿ ಜನರು ಹಲವು ವಸ್ತುಗಳನ್ನು ಕೊಂಡುಕೊಂಡರು. ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಕಬ್ಬು, ಕಟ್ಟುಕವಾಲು ಸೊಪ್ಪು, ಬೇವು ಸೊಪ್ಪು ಮತ್ತು ಮಾವಿನ ಸೊಪ್ಪನ್ನು ಜನರು ಮುಗಿಬಿದ್ದು ಖರೀದಿ ಮಾಡಿದರು.