ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶರಣರ ಕುರಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೊಳ್ಳೇಗಾಲದ ಕದಳಿ ಮಹಿಳಾ ವೇದಿಕೆಯ ವಿಜಯಾ ಗುರುರಾಜ್ ಹಾಗೂ ಗೀತಾ ಮಂಜುನಾಥ್ ದ್ವಿತೀಯ ಬಹುಮಾನ ಪಡೆದರು. ಅಕ್ಕನ ಬಳಗದ ಶೋಭಾ ನಾಗರಾಜು ಹಾಗೂ ವಾಣಿ ರಮೇಶ್ ತಂಡ ನಾಲ್ಕನೇ ಬಹುಮಾನ ಪಡೆಯಿತು. 
ಚಾಮರಾಜನಗರ

ಕದಳಿ ಮಹಿಳಾ ವೇದಿಕೆ ದ್ವಿತೀಯ

ಎ. ಆರ್. ರಘುರಾಮ
ಕೊಳ್ಳೇಗಾಲ : ನಂಜನಗೂಡು ತಾಲೂಕಿನ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶರಣರ ಕುರಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೊಳ್ಳೇಗಾಲದ ಕದಳಿ ಮಹಿಳಾ ವೇದಿಕೆ ದ್ವಿತೀಯ ಬಹುಮಾನ ಮತ್ತು ಅಕ್ಕನ ಬಳಗಕ್ಕೆ ನಾಲ್ಕನೇ ಬಹುಮಾನ ದೊರೆತಿದೆ.
ಸ್ಪರ್ಧೆಯಲ್ಲಿ ಕದಳಿ ಮಹಿಳಾ ವೇದಿಕೆಯ ವಿಜಯಾ ಗುರುರಾಜ್ ಹಾಗೂ ಗೀತಾ ಮಂಜುನಾಥ್ ತಂಡ ವಿಜೇತರಾಗುವ ಮೂಲಕ ಎರಡನೇ ಬಹುಮಾನ ಪಡೆಯಿತು. ಅಂತೆಯೇ ಅಕ್ಕನ ಬಳಗದ ಶೋಭಾ ನಾಗರಾಜು ಹಾಗೂ ವಾಣಿ ರಮೇಶ್ ತಂಡ ನಾಲ್ಕನೇ ಬಹುಮಾನ ಗಳಿಸಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕದಳಿ ವೇದಿಕೆ ಅಧ್ಯಕ್ಷೆ ರೂಪಾ ತೋಟೇಶ್, ಅಕ್ಕನ ಬಳಗದ ಅಧ್ಯಕ್ಷೆ ಸವಿತಾ ಲೋಕೇಶ್, ಅನುಪಮಾ ಗುರಪ್ಪ, ಶ್ವೇತಾ ನಂಜುಂಡಸ್ವಾಮಿ, ಪ್ರೊ.ಸುಧಾ ಇತರರು ಇದ್ದರು.