ಕಾಮಗೆರೆ ಗ್ರಾಮದ ಒಕ್ಕಲಿಗರ ಬಡಾವಣೆಯ 3ನೇ ಕ್ರಾಸ್‌ನಲ್ಲಿ ಕೆಂಪೇ ಗೌಡರ ಭಾವಚಿತ್ರವಿರುವ ಫಲಕವನ್ನು ಅನಾವರಣ ಗೊಳಿಸಲಾಯಿತು. 
ಚಾಮರಾಜನಗರ

ಕೆಂಪೇಗೌಡರ ಭಾವಚಿತ್ರ ಫಲಕ ಅನಾವರಣ

ಪ್ರಮುಖ ಮುಖ್ಯಾಂಶಗಳು

  • ಕಾಮಗೆರೆ ಗ್ರಾಮ
  • ಒಕ್ಕಲಿಗರ ಬಡಾವಣೆಯ 3 ನೇ ಕ್ರಾಸ್‌
ಕೊಳ್ಳೇಗಾಲ: ತಾಲೂಕಿನ ಕಾಮಗೆರೆ ಗ್ರಾಮದ ಒಕ್ಕಲಿಗರ ಬಡಾವಣೆಯ 3 ನೇ ಕ್ರಾಸ್‌ನಲ್ಲಿ ಶುಕ್ರವಾರ ಕೆಂಪೇಗೌಡರ ಭಾವಚಿತ್ರವಿರುವ ಫಲಕವನ್ನು ಅನಾವರಣ ಗೊಳಿಸಲಾಯಿತು.
ಒಕ್ಕಲಿಗರ ಬಡಾವಣೆಯ ಮುಖಂಡರಾದ ಗೋವಿಂದೇಗೌಡ ಮತ್ತು ಕುಮಾರ್‌ಗೌಡ ಅವರು ಫಲಕವನ್ನು ಅನಾವರಣಗೊಳಿಸಿದರು. ಈ ವೇಳೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಮುಖಂಡ ಗೋವಿಂದೇಗೌಡ ಬಡವರಿಗೆ 100 ಬೆಡ್‌ಶೀಟ್ ವಿತರಣೆ ಮಾಡಿದರು. ಕೆಂಪೇಗೌಡರ ಸಂಘದ ವತಿಯಿಂದ ಮರಿಗೌಡ ಮಾದೇವಗೌಡ, ಸತ್ಯಾನಂದ, ಮೊಬೈಲ್ ನಾಗೇಂದ್ರ, ಶಿಕಾರಿಗೌಡ ಅವರನ್ನು ಸನ್ಮಾನಿಸಲಾಯಿತು.
ಒಕ್ಕಲಿಗರ ಬಡಾವಣೆಯ ಮುಖಂಡರಾದ ಸುಂದರ್‌ಗೌಡ,ರಂಜನ್, ರಘು, ರವಿ, ಚಂದ್ರಶೇಖರ್, ರಾಜು ಮಾಸ್ಟರ್, ಮಂಜುನಾಥ್, ಶಿವಕುಮಾರ್ ಹರೀಶ್ ಇತರರಿದ್ದರು.