ಕೊಳ್ಳೇಗಾಲದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿಯಲ್ಲಿ ತಹಸಿಲ್ದಾರ್ ಬಸವರಾಜು ಮಾತನಾಡಿದರು. 
ಚಾಮರಾಜನಗರ

ಸಮಾಜ ಸುಧಾರಣೆಗೆ ಕೈವಾರ ತಾತಯ್ಯ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಬಸವರಾಜು ಅಭಿಮತ
ಕೊಳ್ಳೇಗಾಲ: ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಆಯೋಜಿಸಲಾಗಿತ್ತು.
ಗಣ್ಯರು ಕೈವಾರ ತಾತಯ್ಯ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಬಸವರಾಜು ಮಾತನಾಡಿ, ಕೈವಾರ ತಾತಯ್ಯ ತಮ್ಮ ಕೀರ್ತನೆಗಳ ಮೂಲಕ ಸಮಾಜ ಸುಧಾರಣೆಗೆ ಕೊಡುಗೆ ನೀಡಿದ್ದಾರೆ. ಅವರ ಆದರ್ಶ ಬದುಕನ್ನು ನಾವೆಲ್ಲರೂ ಅಳವಡಿಸಿಕೊಂಡು ಉತ್ತಮ ಸಮಾಜವನ್ನು ಕಟ್ಟಬೇಕು ಎಂದರು.
ತಾಲೂಕು ಪಂಚಾಯಿತಿ ಇಒ ಗುರುಶಾಂತಪ್ಪ ಬೆಳ್ಳುಂಗಡಿ ಮಾತನಾಡಿ, ಸ್ವಾರ್ಥ, ಅಹಂಭಾವದಿಂದ ವಿಶ್ವ ಬಳಲುತ್ತಿದೆ. ದೇಶ-ದೇಶಗಳ ನಡುವೆ ಯುದ್ಧ ನಡೆಯುವಾಗ ಅಲ್ಲಿರುವ ಭಾರತೀಯರು ತಾಯ್ನಡನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದರು.
ಕೈವಾರ ತಾತಯ್ಯ ಅವರ ಮಂದಿರ ಸ್ಥಳಕ್ಕೆ ಜಾಗವನ್ನು ನೀಡಬೇಕೆಂದು ಬಲಜಿಗ ಕುಲ ಬಾಂಧವರ ಸಂಘದ ಅಧ್ಯಕ್ಷ ಟಿ.ಉದಯ್ ಕುಮಾರ್ ಮನವಿ ಮಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ರಾಜೇಂದ್ರ, ಶ್ರೀ ಬಲಜಿಗ ಕುಲ ಬಾಂಧವರ ಸಂಘದ ಅಧ್ಯಕ್ಷ ಉದಯ್ ಕುಮಾರ್, ಖಜಾಂಚಿ ಆನಂದ ಕುಮಾರ್, ಕಾರ್ಯದರ್ಶಿ ರಮೇಶ್ ಬಾಬು, ಯಳಂದೂರು ಸಂಘದ ಅಧ್ಯಕ್ಷ ರವಿಕುಮಾರ್ ಮತ್ತಿತರರಿದ್ದರು.