ತಾಲೂಕಿನ ಜಿನಕಹಳ್ಳಿ ಗ್ರಾಮದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕಕ್ಕೆ ರೈತ ಮುಖಂಡರು ಚಾಲನೆ ನೀಡಿದರು. 
ಚಾಮರಾಜನಗರ

ರೈತಸಂಘದ ಜಿನಕಹಳ್ಳಿ ಗ್ರಾಮ ಘಟಕ ಆರಂಭ

ಕೊಳ್ಳೇಗಾಲ: ತಾಲೂಕಿನ ಜಿನಕಹಳ್ಳಿ ಗ್ರಾಮದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತಸಂಘ ಗ್ರಾಮ ಘಟಕಕ್ಕೆ ಚಾಲನೆ ದೊರೆಯಿತು.
ಗ್ರಾಮದಲ್ಲಿ ರೈತಸಂಘದ ನಾಮಫಲಕವನ್ನು ಅನಾವರಣ ಮಾಡಿದ ಬಳಿಕ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಜಿನಕನಹಳ್ಳಿ ಗ್ರಾಮದ ರೈತ ಘಟಕಕ್ಕೆ ಚಾಲನೆ ದೊರೆತಿದೆ. ಇದ್ದರಿಂದ ರೈತರು ಸಂಘಟಿತರಾಗಿ ಎದುರಾಗುವ ಅನ್ಯಾಯಗಳ ವಿರುದ್ಧ ಹೋರಾಟ ಮಾಡಬೇಕು ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಶಿವಮಲ್ಲು, ಜಿಲ್ಲಾ ಕಾಯಂ ಸದಸ್ಯ ರವಿನಾಯ್ಡು, ರೈತ ಮುಖಂಡರಾದ ಅಶೋಕ್, ನಾಗರಾಜು, ಮಹದೇವು, ಮಸಣಶೆಟ್ಟಿ, ಮಹದೇವಪ್ಪ, ಹನೂರು ಅಧ್ ಅಮ್ಜದ್ ಖಾನ್, ಪಳನಿಸ್ವಾಮಿ, ತವಮಣಿ, ಅರಸು, ತಾಂಡವಮೂರ್ತಿ, ಪರಶಿವಮೂರ್ತಿ, ಕಾಂತ ರಾಜು, ರಾಜೇಶ್, ದಿಲೀಪ್, ನಾಗರಾಜು, ಸತೀಶ್ ಇತರರು ಇದ್ದರು.