ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಬಾಲ ಮೇಳ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮ ಬಸವರಾಜ ತಳವಾರ್ ಉದ್ಘಾಟಿಸಿದರು. ದಾಕ್ಷಾಯಿಣಮ್ಮ, ಎಂ.ಟಿ.ದೀಪು, ಆರ್.ಡಿ.ಗಿರೀಶ್, ಹೇಮಾವತಿ, ಟಿ.ಎಸ್.ವೆಂಕಟೇಶ್, ಸರಸ್ವತಿ ಇದ್ದರು.
- ನ್ಯಾಯಾಧೀಶ ಬಸವರಾಜ ತಳವಾರ ಅಭಿಮತ
ಗುಂಡ್ಲುಪೇಟೆ: ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವ ಕೆಲಸ ಪ್ರತಿಯೊಬ್ಬರ ಕರ್ತವ್ಯ ಹಾಗೂ ಜವಾಬ್ದಾರಿಯೂ ಆಗಿದೆ ಎಂದು ಪಟ್ಟಣ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ ತಿಳಿಸಿದರು.
ತಾಲೂಕಿನ ತೆರಕಣಾಂಬಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಬಾಲ ಮೇಳ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಕಾನೂನಾತ್ಮಕವಾಗಿ ಮಹಿಳೆಯರಿಗೆ ಹಾಗೂ ಮಕ್ಕಳ ರಕ್ಷಣೆಗಾಗಿ ಹಕ್ಕುಗಳನ್ನು ನೀಡಲಾಗಿದೆ. ಇವುಗಳ ಪಾಲನೆಗೆ ಕಾಯ್ದೆ ಜಾರಿ ತಂದಿದ್ದು, ಮಹಿಳೆ ತಮ್ಮ ಎಲ್ಲ ಹಂತಗಳಲ್ಲಿ ಜವಾಬ್ದಾರಿಯನ್ನು ಚಾಚೂತಪ್ಪದೇ ನಿರ್ವಹಿಸಬೇಕಾಗಿದೆ. ಉತ್ತಮ ವ್ಯಕ್ತಿತ್ವದ ಮಕ್ಕಳನ್ನು ರೂಪಿಸುವಲ್ಲಿ ಮಹಿಳೆಯರ ಪಾತ್ರ ಪ್ರಥಮ ಸ್ಥಾನದಲ್ಲಿ. ಈ ನಿಟ್ಟಿನಲ್ಲಿ ಬಾಲ ಮೇಳ ಮತ್ತು ಮಹಿಳಾ ದಿನ ಒಟ್ಟಿಗೆ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ದಾಕ್ಷಾಯಿಣಮ್ಮ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಟಿ.ದೀಪು, ಅಪರ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಆರ್.ಡಿ.ಗಿರೀಶ್, ಸಿಡಿಪಿಒ ಹೇಮಾವತಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಟಿ.ಎಸ್.ವೆಂಕಟೇಶ್, ಜಿಲ್ಲಾ ಬಾಲ ನ್ಯಾಯ ಮಂಡಳಿಯ ಸದಸ್ಯೆ ಸರಸ್ವತಿ, ಕಾರ್ಯದರ್ಶಿ ಜವರಾಜು, ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಗುರುಮಲ್ಲಮ್ಮ. ಉಪಾಧ್ಯಕ್ಷ ಮಂಜುಳಾ ಇತರರು ಇದ್ದರು.