ಕೊಳ್ಳೇಗಾಳದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಎಲ್ಲ ದಾದಿಯರ ಪರವಾಗಿ ಶುಶ್ರೂಷಕ ಅಧಿಕ್ಷಕಿ ಡಾ.ರತಿ ಅವರನ್ನು ಸನ್ಮಾನಿಸಲಾಯಿತು. ಡಾ.ಬಸವರಾಜು, ಡಾ.ಕಾವ್ಯಾ, ಡಾ.ಚೇತನ್, ಅಭಿಲಾಶ್ ಇತರರು ಇದ್ದರು.
ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಬುಧವಾರ ವಿಶ್ವ ದಾದಿಯರ ದಿನವನ್ನು ಮಂಗಳವಾರ ಆಚರಣೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲೋಕೇಶ್ವರಿ ಮಾತನಾಡಿ, ದಾದಿಯರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದು ಸಂಕಷ್ಟದ ಸಮಯದಲ್ಲಿ ರೋಗಿಗಳಿಗೆ ಮಾನಸಿಕ ಧೈರ್ಯ ಮತ್ತು ಸಾಂತ್ವನ ಹೇಳುವ ಕಾರ್ಯವನ್ನು ಮಾಡುತ್ತಾರೆ. ಮೇ 12ರಂದು ದಾದಿಯರ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಸಲ್ಲಿಸುವ ದಿನವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಈ ವೇಳೆ ಆಸ್ಪತ್ರೆಯ ಎಲ್ಲ ದಾದಿಯರ ಪರವಾಗಿ ಶುಶ್ರೂಷಾಧಿಕ್ಷಕಿ ಡಾ.ರತಿ ಅವರನ್ನು ಸನ್ಮಾನಿಸಿಸಲಾಯಿತು. ಆಸ್ಪತ್ರೆಯ ವೈದ್ಯರಾದ ಡಾ.ಬಸವರಾಜು, ಡಾ.ಕಾವ್ಯಾ, ಡಾ.ಚೇತನ್, ಆಡಳಿತ ಅಧಿಕಾರಿ ಪ್ರಫೂಲ್ಲಾದೇವಿ. ಶುಶ್ರೂಷಕರಾದ ಅಭಿಲಾಶ್, ರಾಬರ್ಟ್, ರಾಜಶೇಖರ್, ಜಗದೀಶ್, ಶಶಿಕಲಾ, ನಿರ್ಮಲಾ, ಪುಟ್ಟಲಕ್ಷ್ಮೀ, ರಮ್ಯಾ, ರಶ್ಮಿ ಹಾಗೂ ಆಸ್ಪತ್ರೆಯ ಆಡಳಿತ ವರ್ಗದ ಸಿಬ್ಬಂದಿ ಇದ್ದರು.