ಪಟ್ಟಣದ ಡಾ.ವಿಷ್ಣುವರ್ಧನ್ ರಸ್ತೆಯಲ್ಲಿ ಬಾಯ್ತೆರಿದಿದ್ದ ಮ್ಯಾನ್ ಹೋಲ್‌ಗೆ ಪ್ಲೇಟ್ ಅಳವಡಿಸಿ ಮುಚ್ಚಿರುವುದು. 
ಚಾಮರಾಜನಗರ

ಮ್ಯಾನ್‌ಹೋಲ್‌ಗೆ ಪ್ಲೇಟ್ ಅಳವಡಿಕೆ

ಕೊಳ್ಳೇಗಾಲ: ಪಟ್ಟಣದ ಡಾ.ವಿಷ್ಣುವರ್ಧನ್ ರಸ್ತೆಯಲ್ಲಿ ಬಾಯ್ತೆರೆದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಮ್ಯಾನ್‌ಹೋಲ್‌ಗೆ ಶುಕ್ರವಾರ ನಗರಸಭೆ ಸಿಬ್ಬಂದಿ ಮ್ಯಾನ್‌ಹೋಲ್ ಪ್ಲೇಟ್ ಅಳವಡಿಸಿ ಮುಚ್ಚಿದ್ದಾರೆ.
ರಸ್ತೆ ಮಧ್ಯೆ ಮುಚ್ಚದೆ ಬಿಟ್ಟ ಮ್ಯಾನ್‌ಹೋಲ್ ಎಂಬ ಶೀರ್ಷಿಕೆಯಡಿ ಜ.9 ರಂದು ವಿಜಯವಾಣಿ ದಿನಪತ್ರಿಕೆ ವರದಿ ಪ್ರಕಟಿಸಿತ್ತು. ರಸ್ತೆಯಲ್ಲಿ ಹಲವು ದಿನಗಳಿಂದ ಮ್ಯಾನ್‌ಹೋಲ್ ತೆರೆದುಕೊಂಡಿದೆ. ಇದರಿಂದ ಸಂಭವಿಸಬಹುದಾದ ಅಪಾಯ ತಪ್ಪಿಸಲು ಪೊಲೀಸ್ ಇಲಾಖೆ ಬ್ಯಾರಿಕೇಡ್ ಅಡ್ಡಲಾಗಿ ನಿಲ್ಲಿಸಿದ್ದು ಆದರೆ ಮ್ಯಾನ್‌ಹೋಲ್ ಮುಚ್ಚಲು ನಗರಸಭೆ ಅಧಿಕಾರಿಗಳು ಕ್ರಮವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವರದಿ ಪ್ರಕಟಿಸಿ ಗಮನ ಸೆಳೆಯಲಾಗಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ನಗರಸಭೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ನಿರ್ದೇಶನದಂತೆ ಶುಕ್ರವಾರ ಬಾಯ್ತೆರೆದಿದ್ದ ಮ್ಯಾನ್‌ಹೋಲ್ ದುರಸ್ತಿಪಡಿಸಿ ಮುಚ್ಚಿದ್ದಾರೆ.