ಕೊಳ್ಳೇಗಾಲದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಗುಂಡಾಲ್ ಜಲಾಶಯದ ಹಳೇ ಸ್ಥಿರ ಅಚ್ಚುಕಟ್ಟು ಹಿತರಕ್ಷಣಾ ಸಂಘದ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು. 
ಚಾಮರಾಜನಗರ

ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ
  • ಗುಂಡಾಲ್ ಜಲಾಶಯದ ಹಳೇ ಸ್ಥಿರ ಅಚ್ಚುಕಟ್ಟು ಹಿತರಕ್ಷಣಾ ಸಂಘ
ಕೊಳ್ಳೇಗಾಲ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಗುಂಡಾಲ್ ಜಲಾಶಯದ ಹಳೇ ಸ್ಥಿರ ಅಚ್ಚುಕಟ್ಟು ಹಿತರಕ್ಷಣಾ ಸಂಘದ ಪದಾಧಿಕಾರಿಗಳು ಸೋಮವಾರ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿದರು.
ಸಂಘದ ಅಧ್ಯಕ್ಷ ದಶರಥ ಮಾತನಾಡಿ, ಸರ್ಕಾರ ಆಸ್ತಿಗಳ ತಿದ್ದುಪಡಿ, ಗ್ರಾಮ ಠಾಣಾ ಹದ್ದುಬಸ್ತನ್ನು ಗುರುತುಪಡಿಸುವಂತೆ ಈ ಹಿಂದೆ ನಮ್ಮ ಸಂಘ ಹೋರಾಟ ನಡೆಸಿತ್ತು. ಅದರಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಸರ್ಕಾರ ಆಸ್ತಿಗಳ ತಿದ್ದುಪಡಿ, ಗ್ರಾಮ ಠಾಣಾ ಹದ್ದುಬಸ್ತನ್ನು ಗುರುತಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಈ ಸಂಬಂಧ ಹನೂರು ಭಾಗದಲ್ಲಿ ಯಾವುದೇ ಕೆಲಸವಾಗಿಲ್ಲ. ಗ್ರಾಮ ಠಾಣಾ ವ್ಯಾಪ್ತಿ ಗುರುತು ಮಾಡದಿರುವುದರಿಂದ ಕೊಳ್ಳೇಗಾಲ ನಗರಸಭೆಯಲ್ಲಿ ಇ-ಸ್ವತ್ತು ಪಡೆಯಲು ಪರದಾಡುತ್ತಿದ್ದಾರೆ. ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.
ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ರಾಮಕೃಷ್ಣ, ಲಕ್ಕರಸನಪಾಳ್ಯ ಮಹೇಶ್, ಶಿವರಾಜು, ನಟರಾಜು, ಮಾದೇಶ್, ಸಿದ್ದಯ್ಯನಪುರ ರಾಜು, ಮಧುವನಹಳ್ಳಿ ಬಸವರಾಜು, ಸರಗೂರು ವೀರಭದ್ರಸ್ವಾಮಿ, ವಾಸು ಮತ್ತಿತರರಿದ್ದರು.