ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತತ್ವಜ್ಞಾನಿ ವಿದ್ಯಾರಣ್ಯ ಮಹರ್ಷಿಗಳ ದಿವ್ಯ ಸಂದೇಶಗಳು ಮತ್ತು ಕೊಡುಗೆಗಳ ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸುರೇಶ್ ಋಗ್ವೇದಿ, ಬಿ.ಕೆ.ಆರಾಧ್ಯ, ಶಿವಲಿಂಗಮೂರ್ತಿ ಇತರರು ಇದ್ದರು. 
ಚಾಮರಾಜನಗರ

ಸನಾತನ ಧರ್ಮ ಸಂರಕ್ಷಕ ಶ್ರೀವಿದ್ಯಾರಣ್ಯರ ಸ್ಮರಣೆ

ಪ್ರಮುಖ ಮುಖ್ಯಾಂಶಗಳು

  • ಕಸಾಪದಿಂದ ಉಪನ್ಯಾಸ ಕಾರ್ಯಕ್ರಮ
  • ತತ್ವಜ್ಞಾನಿ ವಿದ್ಯಾರಣ್ಯ ಮಹರ್ಷಿಗಳ ದಿವ್ಯ ಸಂದೇಶಗಳು ಮತ್ತು ಕೊಡುಗೆಗಳ ಕುರಿತ ಉಪನ್ಯಾಸ
ಚಾಮರಾಜನಗರ: ಶ್ರೀವಿದ್ಯಾರಣ್ಯರು ಸಾಹಿತ್ಯ, ಕಲೆ, ಸಂಸ್ಕೃತಿ, ಪರಂಪರೆ, ವಾಸ್ತುಶಿಲ್ಪ ಕ್ಷೇತ್ರಗಳಿಗೆ ಮಹತ್ವ ಕೊಡುಗೆ ನೀಡಿದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಋಗ್ವೇದಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಜಗದ್ಗುರು, ತತ್ವಜ್ಞಾನಿ ವಿದ್ಯಾರಣ್ಯ ಮಹರ್ಷಿಗಳ ದಿವ್ಯ ಸಂದೇಶಗಳು ಮತ್ತು ಕೊಡುಗೆಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
13ನೇ ಶತಮಾನದಲ್ಲಿ ಹರಿಹರ ಮತ್ತು ಬುಕ್ಕರಾಯರ ಮೂಲಕ ಕನ್ನಡ ಸಾಮ್ರಾಜ್ಯವನ್ನು ಸ್ಥಾಪಿಸಿ ಇಡೀ ದಕ್ಷಿಣ ಭಾರತದಲ್ಲಿ ಕನ್ನಡ ಸಂಸ್ಕೃತಿಯನ್ನು ಮತ್ತು ಪರಂಪರೆಯನ್ನು ಸಂರಕ್ಷಿಸಿ ಭಾರತೀಯ ಸನಾತನ ಧರ್ಮವನ್ನು ಉಳಿಸಿ ಬೆಳೆಸಿದ ಕೀರ್ತಿ ಶ್ರೀವಿದ್ಯಾರಣ್ಯರಿಗೆ ಸಲ್ಲುತ್ತದೆ. ವಿಜಯನಗರ ಸಾಮ್ರಾಜ್ಯ ವಿಶ್ವದಲ್ಲಿ ಮರೆಯಲಾಗದ ಸಾಮ್ರಾಜ್ಯವೆಂದು ಪ್ರಸಿದ್ಧಿಯಾಗಿದೆ. ಆಡಳಿತ ಸೇವೆ ಆಧ್ಯಾತ್ಮ, ಧರ್ಮ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ನೃತ್ಯ ಕಲೆ ಹೀಗೆ ಹಲವು ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯ ಮೂಲಕ ಇಡೀ ವಿಶ್ವಕ್ಕೆ ವಿಜಯನಗರ ಪ್ರಸಿದ್ಧಿಯಾಗಿತ್ತು. ಈ ಸಾಮ್ರಾಜ್ಯವನ್ನು ಸ್ಥಾಪಿಸಲು ಮಾರ್ಗದರ್ಶನವನ್ನು ನೀಡಿ ಕರ್ನಾಟಕ ರಾಜ್ಯ ಸಂಸ್ಥಾಪನಾಚಾರ್ಯ ಎಂಬ ಗೌರವಕ್ಕೆ ವಿದ್ಯಾರಣ್ಯರು ಪಾತ್ರರಾಗುತ್ತಾರೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಎಲ್.ಶಿವಲಿಂಗಮೂರ್ತಿ ಮಾತನಾ, ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯರ ಆಡಳಿತ ವಿಶ್ವಕ್ಕೆ ಮಾದರಿ. ಕಲೆ,ಸಂಗೀತ, ಸಾಹಿತ್ಯಕ್ಕೆ ಮತ್ತೊಂದು ಹೆಸರೇ ವಿಜಯನಗರ ಸಾಮ್ರಾಜ್ಯ. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಮೂಲ ಕಾರಣಕರ್ತರೇ ಜಗದ್ಗುರು ಶ್ರೀವಿದ್ಯಾರಣ್ಯರು. ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿಗಳು, ಚಿಂತಕರು, ದಾರ್ಶನಿಕರು, ಆಚಾರ್ಯರು ಸರ್ವ ಕ್ಷೇತ್ರಗಳ ಸಾಧಕರ ಪರಿಚಯ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಬಿ.ಕೆ ಆರಾಧ್ಯ, ಕುಮಾರ್, ಸುರೇಶ್, ಮುರುಗೇಶ್, ದೊಡ್ಡರಾಜು, ಸಿದ್ದೇಶ್, ಗಣೇಶ್, ಮನೋಜ್, ಹರಿಹರನ್, ಯೋಗೀಶ್, ವೇದಾಂತ ಇದ್ದರು.