ಬಂಡಳ್ಳಿ ಮದರ್ ಮುಜಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಕಾರ್ಯದರ್ಶಿ ಅಂಜುಮ್ ಪಾಷ ಚಾಲನೆ ನೀಡಿದರು. ಬಸವರಾಜು, ನಟರಾಜು, ಬಸವಣ್ಣ ಇತರರು ಇದ್ದರು.  
ಚಾಮರಾಜನಗರ

ಕ್ರೀಡೆಯಿಂದ ಆರೋಗ್ಯ ವೃದ್ಧಿ

ಪ್ರಮುಖ ಮುಖ್ಯಾಂಶಗಳು

  • ಅಂಜುಮ್ ಪಾಷ ಅಭಿಪ್ರಾಯ
ಹನೂರು: ಕ್ರೀಡೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಬಂಡಳ್ಳಿ ಮದರ್ ಮುಜಿದ ಹಿರಿಯ ಪ್ರಾಥಮಿಕ ಶಾಲೆ ಕಾರ್ಯದರ್ಶಿ ಅಂಜುಮ್ ಪಾಷ ತಿಳಿಸಿದರು.
ಶಾಲೆಯ 33ನೇ ವಾರ್ಷಿಕೋತ್ಸವದ ಅಂಗವಾಗಿ ಹಳೇ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಬುಧವಾರ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಕ್ರೀಡಾ ಪ್ರತಿಭೆ ಇರುತ್ತದೆ. ಆದರೆ ಅವಕಾಶಗಳು ದೊರಕದಿದ್ದಾಗ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸ್ಪರ್ಧಾ ಮನೋಭಾವ ಬೆಳೆಯುತ್ತದೆ. ಆರೋಗ್ಯವೂ ವೃದ್ಧಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನಗಂಡು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.
ವಿವಿಧ ಕ್ರೀಡೆಯ ವಿಜೇತರು: ಪಾಲಕರ ವಿಭಾಗದಲ್ಲಿ ಚಂದ್ರಕಲಾ, ಜ್ಯೋತಿ, ವೀರಭದ್ರ, ಮಹದೇವಪ್ಪ, ನಾಗೇಶ್, ಮಹದೇವನಾಯ್ಕ ಹಾಗೂ ಹಳೇ ವಿದ್ಯಾರ್ಥಿಗಳ ವಿಭಾಗದಲ್ಲಿ ರಾಹಿಲ್, ನವಾಜ್, ಶಫೀವುಲ್ಲಾ, ಆಸ್ಮಿನ ರೋಹಿ, ಅಮ್ರಿನ್ ಬಾನು ವಿಜೇತರಾದರು. ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ಜೆಸ್ಸೀಮ್, ಮುಖ್ಯ ಶಿಕ್ಷಕ ಬಸವರಾಜು, ಶಿಕ್ಷಕರಾದ ನಟರಾಜು, ಬಸವಣ್ಣ ಇನ್ನಿತರರು ಇದ್ದರು.