ಚಾಮರಾಜನಗರದ ಖಾಸಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ರಮೇಶ್ ಅವರನ್ನು ಸನ್ಮಾನಿಸಲಾಯಿತು. ಶಿವಣ್ಣ, ಸುರೇಶ್, ಶಿವಪ್ರಸಾದ್, ಸಿದ್ದರಾಜು ಇದ್ದರು.
- ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಟಿ.ಪ್ರದೀಪ್ ಹೇಳಿಕೆ
ಚಾಮರಾಜನಗರ: ಆಸಕ್ತಿಯಿಂದ ಕೆಲಸ ಮಾಡಿದರೆ ಪ್ರಾಮಾಣಿಕತೆ ನಿರೀಕ್ಷಿಸಬಹುದು ಎಂದು ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಟಿ.ಪ್ರದೀಪ್ ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಮರಿಯಾಲ ಬಳಿ ಇರುವ ಖಾಸಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಉಗ್ರಾಣ ಪಾಲಕ ಹಾಗೂ ಸೆಸ್ಕ್ ನೌಕರರ ಸಂಘದ ಖಜಾಂಚಿ ಎಸ್.ರಮೇಶ್ ಅವರ ವಯೋ ನಿವೃತ್ತಿ ಬೀಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು. ಉಗ್ರಾಣ ಪಾಲನೆ ಕೆಲಸ ಸುಲಭದ್ದಲ್ಲ. ಸ್ವಲ್ಪ ವ್ಯತ್ಯಾಸವಾದರೂ ತಲೆಗೆ ಬರುತ್ತದೆ. ಇಂತಹ ಕೆಲಸವನ್ನು ರಮೇಶ್ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಹಿಂದಿನ ಹಾಗೂ ಇಂದಿನ ವ್ಯವಹಾರಕ್ಕೆ ವ್ಯತ್ಯಾಸ ಇದೆ ಎಂದರು.
ಸನ್ಮಾನ ಸ್ವೀಕರಿಸಿದ ಮಾತನಾಡಿದ ರಮೇಶ್, ಮೂವತ್ತು ವರ್ಷದ ವೃತ್ತಿ ಜೀವನದಲ್ಲಿ ಇಪ್ಪತೈದು ವರ್ಷ ಚಾಮರಾಜನಗರದಲ್ಲೆ ಸೇವೆ ಸಲ್ಲಿಸಿ ಈಗ ನಿವೃತ್ತಿಯಾಗುತ್ತಿದ್ದೇನೆ ಎಂದರು.
ನೌಕರರ ಸಂಘದ ಪಧಾದಿಕಾರಿಗಳು, ವಿದ್ಯುತ್ ಗುತ್ತಿಗೆದಾರರು, ಗ್ರಾಮ ವಿದ್ಯುತ್ ಪ್ರತಿನಿಧಿಗಳು, ಎಸ್.ಸಿ. ಎಸ್.ಟಿ.ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಯವರು ರಮೇಶ್ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ, ಲೆಕ್ಕಾಧಿಕಾರಿ ಎನ್.ಮಹೇಶ್, ಸ್ಥಳೀಯ ಸಮಿತಿ ಅಧ್ಯಕ್ಷ ಮುರುಳಿ ಕೃಷ್ಣ ಸ್ವಾಮಿ, ಲೆಕ್ಕಾಧಿಕಾರಿ ನಿವೃತ್ತ ಆರ್ಥಿಕ ಸಲಹೆಗಾರ ಶಿವಣ್ಣ, ಎಇಇ ಸುರೇಶ್, ಸಿದ್ದಲಿಂಗಪ್ಪ, ವಾಜೀದ್ ಖಾನ್, ದೃಪದ್, ಸಿದ್ದರಾಜು, ಜೆಇ ಸಿದ್ದರಾಜಪ್ಪ, ಸತೀಶ್, ದೊರೆಸ್ವಾಮಿ, ಮಂಜುನಾಥ್, ಶಿವಪ್ರಶಾಂತ್, ಪ್ರಶಾಂತ್, ಸಂತೋಷ್, ಸೋಮು, ರಮೇಶ್, ಶಿವಣ್ಣ, ಮಹದೇವಯ್ಯ ಇತರರು ಇದ್ದರು.