ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ಕೊಠಡಿಗೆ ಬುಧವಾರ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು. ಪ್ರಾಧಿಕಾರದ ಕಾರ್ಯದರ್ಶಿ ರಘು, ನಾಮನಿರ್ದೇಶಿತ ಸದಸ್ಯ ಮರಿಸ್ವಾಮಿ, ಕಾಗಲವಾಡಿ, ಮಹದೇವಪ್ಪ, ಕೀಳನಪುರ, ಗಂಗನ ತಿಮ್ಮಯ್ಯ, ಮೆಲ್ಲಹಳ್ಳಿ , ಕುಮಾರ್ ವಿಜಯ್ ರಾವಂದೂರು ಇತರರಿದ್ದರು 
ಚಾಮರಾಜನಗರ

ಮ.ಬೆಟ್ಟದ ಹುಂಡಿಯಲ್ಲಿ 2.73 ಕೋಟಿ ರೂ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದ ಹುಂಡಿಯಲ್ಲಿ2.73 ಕೋಟಿ ರೂ. ಸಂಗ್ರಹವಾಗಿದೆ.
ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ದೇಗುಲದಲ್ಲಿ ಬುಧವಾರ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಹುಂಡಿಯಲ್ಲಿದ್ದ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ಕೊಠಡಿಯಲ್ಲಿ ಹಣ ಎಣಿಕೆ ಕಾರ್ಯವನ್ನು ಪೊಲೀಸ್ ಬಂದೋಬಸ್ತ್ ಮತ್ತು ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಸಲಾಯಿತು.
ಈ ವೇಳೆ 27 ದಿನಗಳಲ್ಲಿ 2,73,57,105 ರೂ. ಸಂಗ್ರಹವಾಗತ್ತು. 44 ಗ್ರಾಂ ಚಿನ್ನ, 977 ಗ್ರಾಂ ಬೆಳ್ಳಿ, 7 ವಿದೇಶಿ ನೋಟುಗಳು, 2 ಸಾವಿರ ಮುಖಬೆಲೆಯ 10 ನೋಟುಗಳು ಸಿಕ್ಕವು. ಒಟ್ಟು ಮೊತ್ತ 2,73,57,105 ರೂ.ಗಳಲ್ಲಿ 2,54,52,762 ರೂ. ನೋಟುಗಳು, 13,45,164 ರೂ.ನಾಣ್ಯಗಳು, 5,59,179 ರೂ.ಇ-ಹುಂಡಿಯಲ್ಲಿ ಸಂಗ್ರಹವಾಗಿತ್ತು.
ಕಳೆದ ಮೇ 22ರಂದು ಹುಂಡಿ ಎಣಿಕೆ ನಡೆದಿತ್ತು. ಆಗ 2,21,49,797 ರೂ. ನಗದು, 24 ಗ್ರಾಂ ಚಿನ್ನ ಹಾಗೂ 1 ಕೆ.ಜಿ 550 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು. ಇದರ ಹಿಂದಿನ ತಿಂಗಳಾದ ಏ.29ರಂದು ನಡೆದ ಎಣಿಕೆಯಲ್ಲಿ 3,13,12,118 ರೂ.ನಗದು, 64 ಗ್ರಾಂ ಚಿನ್ನ ಹಾಗೂ 2.50 ಕೆ.ಜಿ.ಬೆಳ್ಳಿ ಸಂಗ್ರಹವಾಗಿತ್ತು.
ಹುಂಡಿ ಹಣ ಎಣಿಕೆ ವೇಳೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು, ನಾಮನಿರ್ದೇಶಿತ ಸದಸ್ಯ ಮರಿಸ್ವಾಮಿ, ಕಾಗಲವಾಡಿ, ಮಹದೇವಪ್ಪ, ಕೀಳನಪುರ, ಗಂಗನ ತಿಮ್ಮಯ್ಯ, ಮೆಲ್ಲಹಳ್ಳಿ , ಕುಮಾರ್ ವಿಜಯ್ ರಾವಂದೂರು, ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕ ಪತ್ರ ಸಲಹೆಗಾರ ಮಹದೇವು, ಉಪ ಕಾರ್ಯದರ್ಶಿ ಜಿ.ಎಲ್. ಚಂದ್ರಶೇಖರ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಮರಗದಂ, ಬೆರಳಚ್ಚುಗಾರರು ಹಾಗೂ ಪ್ರಾಧಿಕಾರದ ಸಿಬ್ಬಂದಿ, ಪೊಲೀಸರು, ಸಿಬ್ಬಂದಿ ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿ ಹಾಜರಿದ್ದರು.
.