ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿಪುರ ಗ್ರಾಮದಲ್ಲಿ ಬುಧವಾರ ಗ್ರಾಮ ದೇವತೆ ಹೊ ನ್ನಳ್ಳಿ ಮಾರಮ್ಮನ ಕೇಲು ಮತ್ತು ಸತ್ತಿಗೆ ಉತ್ಸವ ಅದ್ದೂರಿಯಾಗಿ ನೆರವೇರಿತು
ಕೊಳ್ಳೇಗಾಲ: ತಾಲೂಕಿನ ತಿಮ್ಮರಾಜೀಪುರ ಗ್ರಾಮದಲ್ಲಿ ಬುಧವಾರ ಗ್ರಾಮ ದೇವತೆ ಹೊನ್ನಳ್ಳಿ ಮಾರಮ್ಮನ ಸತ್ತಿಗೆ, ಕೇಲು ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದಲ್ಲಿ 3 ವರ್ಷದ ಬಳಿಕ 5 ದಿನಗಳ ಹೊನ್ನಳ್ಳಿ ಮಾರಮ್ಮ ಹಾಗೂ ಕುರುಬನಕಟ್ಟೆ ಕಂಡಾಯ ಕೊಂಡೋತ್ಸವ ಗ್ರಾಮಸ್ಥರು ಆಚರಣೆ ಮಾಡಿದರು. ಮಾರಮ್ಮನ ಸತ್ತಿಗೆ, ಕೇಲು ಉತ್ಸವ ಸಂಪ್ರದಾಯದಂತೆ ಅದ್ದೂರಿಯಾಗಿ ನೆರವೇರಿತು.
ಆದಿಜಾಂಬವ ಸಮುದಾಯದ ಯಜಮಾನರಾದ ಕೆ.ಲಿಂಗಯ್ಯ, ಆರ್.ಎಂ.ಸಿದ್ದಯ್ಯ, ಸಿದ್ದಪ್ಪ, ವೆಂಕಟಯ್ಯ, ರಂಗಸ್ವಾಮಿ, ನಂಜುಂಡ, ರಂಗಸ್ವಾಮಿ, ಕೆಂಪಣ್ಣ, ಗ್ರಾಮದ ಮಣಿಗಾರ್ ಕುಟುಂಬದ ರಾಜು ತಿಮ್ಮರಾಜೀಪುರ, ಗೌಡ್ರು ಶಿವಣ್ಣ, ಮಹದೇವಪ್ಪ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಪುಟ್ಟಣ್ಣ ಇತರರಿದ್ದರು.