ಹನೂರಿನ ರಾಮ ಮಂದಿರದಲ್ಲಿ ರಾಮ ನವಮಿ ಆಚರಿಸಲಾಯಿತು.
- ವಿವಿಧ ಹೋಮ ಹಾಗೂ ವಿಶೇಷ ಪೂಜೆ
- ನವಗ್ರಹ ಹೋಮ, ರಾಮ ತಾರಕ ಹೋಮ
ಹನೂರು: ಶ್ರೀರಾಮನವಮಿ ಪ್ರಯುಕ್ತ ಪಟ್ಟಣದ ರಾಮ ಮಂದಿರದಲ್ಲಿ ಶುಕ್ರವಾರ ವಿವಿಧ ಹೋಮ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು.
ರಾಮನವಮಿ ಅಂಗವಾಗಿ ಮಂದಿರವನ್ನು ತಳಿರು, ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ 9ರ ವೇಳೆಯಲ್ಲಿ ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ನವಗ್ರಹ ಹೋಮ, ರಾಮ ತಾರಕ ಹೋಮ ಹಾಗೂ ಪೂರ್ಣಾಹುತಿಯನ್ನು ನೆರವೇರಿಸಿ ವಿವಿಧ ಮಂತ್ರಗಳನ್ನು ಪಠಿಸುವುದರ ಮೂಲಕ ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದು, ದೇವರ ದರ್ಶನವನ್ನು ಪಡೆಯುವುದರ ಮೂಲಕ ರಾಮನ ಜಪವನ್ನು ಜಪಿಸಿದರು. ಮಧ್ಯಾಹ್ನ 1ರ ವೇಳೆಗೆ ಭಕ್ತರಿಗೆ ಮಜ್ಜಿಗೆ ಹಾಗೂ ಹೆಸರು ಬೇಳೆ ವಿತರಿಸಲಾಯಿತು.