ಚಾಮರಾಜನಗರ ತಾಲೂಕಿನ ಹರದನಹಳ್ಳಿ-ಬಂಡಿಗೆರೆ ಗ್ರಾಮದಲ್ಲಿ ನಡೆದ ಹಿಂದೂ ಸಮಾಜೋತ್ಸವ ಶೋಭಾಯಾತ್ರೆಯಲ್ಲಿ ಮಕ್ಕಳು ಹಾಲರವೆ ಹೊತ್ತು ಸಾಗಿದರು.
- ಚಿಂತಕ ಡಾ.ಸುಧಾಕರ್ ಹೊಸಳ್ಳಿ ಅಭಿಮತ
- ಬಂಡಿಗೆರೆ-ಹರದನಹಳ್ಳಿಯಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ
- ಶ್ರೀ ದಿವ್ಯಲಿಂಗೇಶ್ವರ ಸ್ವಾಮಿ ದೇವಸ್ಧಾನದ ಅವರಣದಲ್ಲಿ ನಡೆದ ಸಭೆ
ಚಾಮರಾಜನಗರ: ಹಿಂದೂ ಸಮಾಜೋತ್ಸವ ಸಮಾಜದ ಏಕತೆ, ಸಂಸ್ಕೃತಿ ಉಳಿವು ಹಾಗೂ ಧಾರ್ಮಿಕ ಜಾಗೃತಿಯ ಪ್ರತೀಕವಾಗಿದೆ ಎಂದು ಚಿಂತಕ ಡಾ.ಸುಧಾಕರ್ ಹೊಸಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಹರದನಹಳ್ಳಿ, ಬಂಡಿಗೆರೆ ಗ್ರಾಮದ ಶ್ರೀ ದಿವ್ಯಲಿಂಗೇಶ್ವರ ಸ್ವಾಮಿ ದೇವಸ್ಧಾನದ ಅವರಣದಲ್ಲಿ ಗುರುವಾರ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಸಮಾರಂಭ ಮತ್ತು ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಡೀ ವಿಶ್ವದಲ್ಲಿ ಶಾಂತಿಯನ್ನು ನೆಲೆಸುವ ತಾಕತ್ತು ನಮ್ಮ ದೇಶಕ್ಕಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಗುಣವನ್ನು ನಮ್ಮ ಮಣ್ಣು ಹೊಂದಿದೆ. ಈ ನಿಟ್ಟಿನಲ್ಲಿ ಹಿಂದೂಗಳನ್ನು ಒಗ್ಗೂಡಿಸಲು ಹಾಗೂ ಅವರಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸಲು ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಧರ್ಮ, ಭಾವನೆ, ಶಾಂತಿ ಮತ್ತು ಸೌಹಾರ್ದತೆಯನ್ನು ಮೂಡಿಸುತ್ತದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮ ಐತಿಹಾಸಿಕ ಸ್ಥಳವಾದ ಶ್ರೀಗೋಮುಖ ಕ್ಷೇತ್ರದಿಂದ ಶೋಬಾಯಾತ್ರೆಗೆ ಚಾಲನೆ ನೀಡಲಾಯಿತು. ಈ ಯಾತ್ರೆಯಲ್ಲಿ 101 ಮಕ್ಕಳ ಹಾಲರವೆ ಉತ್ಸವದೊಂದಿಗೆ ಸಾಗಿದರು. ವಿವಿಧ ಜಾನಪದ ಕಲಾತಂಡಗಳು ಮರೆವಣಿಗೆಯಲ್ಲಿ ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ವಿಜಯಕುಮಾರ್, ಹರದನಹಳ್ಳಿ ಮತ್ತು ಬಡಿಗೆರೆ ಗ್ರಾಮದ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.