ಚಾಮರಾಜನಗರ ತಾಲೂಕು ಸಮೀಪದ ತಮಿಳುನಾಡಿನ ತಾಳವಾಡಿಯಲ್ಲಿ ಮಾರಿಯ್ಮಮನ ದೇವಸ್ಥಾನ ಸಮಿತಿ ಊಟ ಬಡಿಸಿದ ಮುಸ್ಲಿಂ ಮುಖಂಡರು. 
ಚಾಮರಾಜನಗರ

ಹಿಂದು-ಮುಸ್ಲಿಂ ಮುಖಂಡರ ಭಾವೈಕ್ಯತೆಯ ಭೋಜನಕೂಟ

ಪ್ರಮುಖ ಮುಖ್ಯಾಂಶಗಳು

  • ಸೌಹಾರ್ದತೆಗೆ ಸಾಕ್ಷಿಯಾದ ತಾಳವಾಡಿಯ ಮಾರಿಯಮ್ಮನ ಹಬ್ಬ
  • ಗಡಿಯಲ್ಲಿರುವ ತಾಳವಾಡಿಯಲ್ಲಿ ಸಾಮರಸ್ಯದ ಜೀವನ
ಚಾಮರಾಜನಗರ: ತಾಲೂಕಿನ ಸಮೀಪದ ತಮಿಳುನಾಡಿನ ತಾಳವಾಡಿಯಲ್ಲಿ ಮಾರಿಯಮ್ಮನ ಹಬ್ಬದ ಆಚರಣೆಯ ಪ್ರಯುಕ್ತ ಹಿಂದು-ಮುಸ್ಲಿಂ ಮುಖಂಡರು ಔತಣಕೂಟ ಏರ್ಪಡಿಸಿ ಭಾವೈಕ್ಯತೆ ಮೆರೆದರು.
ಗ್ರಾಮದಲ್ಲಿ ಮಾರಿಯಮ್ಮನ ದೇವಸ್ಥಾನದ ಪಕ್ಕದಲ್ಲೇ ಮಸೀದಿ ಇದೆ. ಇತ್ತೀಚೆಗಷ್ಟೇ ಮಾರಿಯಮ್ಮನ ಹಬ್ಬದ ಪ್ರಯುಕ್ತ ದೇವಸ್ಥಾನದ ಬಳಿಯ ಜಾಗ ಅಂದರೆ, ಮಸೀದಿ ಮುಂದೆ ಕೊಂಡೋತ್ಸವ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮುಸ್ಲಿಮರು ಸಾಮರಸ್ಯದಿಂದ ಹಬ್ಬ ಆಚರಣೆಗೆ ಸಹಕಾರ ನೀಡಿದ್ದರು. ಹಾಗಾಗಿ ಮಾರಿಯಮ್ಮನ ದೇವಾಲಯದ ಉತ್ಸವ ಸಮಿತಿ ವತಿಯಿಂದ ಸೋಮವಾರ ಮುಸ್ಲಿಂ ಮುಖಂಡರಿಗೆ ಭೋಜನ ಕೂಟ ಏರ್ಪಡಿಸಲಾಗಿತ್ತು. ಬಳಿಕ ಮಂಗಳವಾರ ಮುಸ್ಲಿಂ ಮುಖಂಡರಿಂದ ಮಾರಿಯಮ್ಮನ ಉತ್ಸವ ಸಮಿತಿ ಸದಸ್ಯರಿಗೆ ಊಟ ಹಾಕಿಸಿ ಭಾವೈಕ್ಯತೆ ಮರೆಯಲಾಯಿತು.