ನಾಕಾಬಂದಿ ಮಾಡಿ ಭಾರಿ ವಾಹನ ತಡೆಯಲಾಯಿತು. 
ಚಾಮರಾಜನಗರ

ಇಳಕಲ್‌ ರಾಜ್ಯ ಹೆದ್ದಾರಿಯಲ್ಲಿ ಮೂರು ದಿನಗಳಲ್ಲಿ ಭಾರಿ ವಾಹನ ಸಂಚಾರ ಸ್ಥಗಿತ

ಪ್ರಮುಖ ಮುಖ್ಯಾಂಶಗಳು

  • ಹೆದ್ದಾರಿಯಲ್ಲಿ ತುಂಬಿದ ಸಂಪೂರ್ಣ ಹೊಂಡ
  • ಶಾಸಕ ಸತೀಶ ಸೈಲ್‌ ಸೂಚನೆಯಂತೆ ಕ್ರಮ

ಕಾರವಾರ:

ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಭಾರಿ ವಾಹನ ಸಂಚಾರವನ್ನು ತಡೆದ ಪೊಲೀಸರು ಕಾರವಾರದ ಬಿಲ್ಟ್ ಸರ್ಕಲ್‌ನಲ್ಲಿಯೇ ನಾಕಾಬಂದಿ ಮಾಡಿದ್ದಾರೆ. ಇಲ್ಲಿ 20 ಕ್ಕೂ ಹೆಚ್ಚು ಭಾರಿ ವಾಹನಗಳು ನರದಲ್ಲೇ ಠಿಕಾಣಿ ಹೂಡಿವೆ.

ಕಾರವಾರ-ಇಳಕಲ್ ರಾಜ್ಯ ಹೆದ್ದಾರಿ-6 ಕೆಲ ಭಾಗಗಳನ್ನು ಇದೇ ವರ್ಷ ದುರಸ್ತಿ ಮಾಡಲಾಗಿತ್ತು. ಅಲ್ಲಿ 35 ಟನ್ ಭಾರದ ವಾಹನ ಮಾತ್ರ ಓಡಾಡಲು ಸಾಧ್ಯವಿದೆ. ಅಧಿಕ ಭಾರದ ವಾಹನಗಳನ್ನು ಕೊಂಡೊಯ್ಯಬಾರದು ಎಂದು ನಿಷೇಽಸಲಾಗಿತ್ತು. ಹೆದ್ದಾರಿ ಪ್ರಾರಂಭವಾಗುವಲ್ಲಿ ಬೋರ್ಡ್ ಅಳವಡಿಸಲಾಗಿತ್ತು. ಆದರೆ, ನಿಯಮ ಸಮರ್ಪಕವಾಗಿ ಜಾರಿಯಾಗಿಲ್ಲ. ಪ್ರತಿನಿತ್ಯ 60 -65 ಟನ್ ಭಾರದ ಭಾರಿ ಟ್ಯಾಂಕರ್‌ಗಳು, ಟಿಪ್ಪರ್‌ಗಳು ನಿರಂತರವಾಗಿ ಓಡಾಟ ನಡೆಸಿವೆ.

ಕಾರವಾರ ಕಿನ್ನರದಿಂದ ಆಚೆ ಮಲ್ಲಾಪುರವರೆಗೆ ಸುಮಾರು 39 ಕಿಮೀ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಸಿದ್ದರ, ಕೆರವಡಿ, ಇರಪಾಗೆ ಮುಂತಾದೆಡೆ ಇಡೀ ಕಾರು ನಿಲ್ಲುವಷ್ಟು ದೊಡ್ಡ ಹೊಂಡಗಳಾಗಿವೆ. ಭಾರಿ ವಾಹನಳು ಓಡಾಡಿ ರಸ್ತೆ ಕೆಸರು ಗದ್ದೆಯಾಗಿದೆ. ಹಲವು ಬಾರಿ ಭಾರಿ ವಾಹನಗಳು ರಸ್ತೆಯಲ್ಲಿ ಸಿಲುಕಿ ನಾಲ್ಕಾರು ತಾಸು ಸಂಚಾರ ಸಿಕ್ಕು ಉಂಟಾಗುತ್ತಿದೆ.

ಬಸ್‌ಗಳು ಟಯರ್ ಪಂಚರ್ ಆಗಿ ಸಿಕ್ಕಿ ಬೀಳುತ್ತಿವೆ. ಇದರಿಂದ ಉದ್ಯೋಗಕ್ಕೆ ತೆರಳುವವರು, ವಿದ್ಯಾರ್ಥಿಗಳಿಗೆ ತೀವ್ರ ಅಡಚಣೆ ಉಂಟಾಗಿದೆ. ಈ ಸಮಸ್ಯೆಯಿಂದ ಕಳೆದ ಎರಡು ದಿನಗಳಿಂದ ಬಸ್ ಸಂಚಾರವನ್ನು ಸ್ಥಗಿತ ಮಾಡಲಾಗಿದ್ದು, ಸ್ಥಳೀಯರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಷ್ಟಾದ ನಂತರವೂ ಸಾರಿಗೆ, ಪೊಲೀಸ್ ಇಲಾಖೆ ಅಽಕಾರಿಗಳು ಯಾವುದೇ ಭಾರಿ ವಾಹನ ಓಡಾಟ ಕಂಡುಬರುತ್ತಿಲ್ಲ ಎಂದು ಜಾಣ ಕುರುಡು ವಹಿಸಿದ್ದರು.

ಆಕ್ಷೇಪ

ಕೈಗಾ ಅಣು ವಿದ್ಯುತ್ ಕೇಂದ್ರದ ಕಾಮಗಾರಿ ಕೈಗೊಂಡಿರುವ ಖಾಸಗಿ ಕಂಪನಿಯು ಭಾರಿ ವಾಹನಗಳನ್ನು ನಿರಂತರವಾಗಿ ಓಡಿಸುತ್ತಿದ್ದು, ಇದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಸ್ಥಳೀಯರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಸೋಮವಾರ ತಡ ರಾತ್ರಿ ಭಾರಿ ವಾಹನವೊಂದು ಸಿಕ್ಕಿ ಬಿದ್ದು, ವಾಹನ ಸಂಚಾರ ಬಂದ್‌ ಆಗಿತ್ತು. ಶಾಸಕ ಸತೀಶ ಸೈಲ್ ಹಾಗೂ ಸ್ಥಳೀಯರು ಆಕ್ಷೇಪಿಸಿದರು. ಡಿವೈಎಸ್‌ಪಿ ಗಿರೀಶ ಎಸ್‌ವಿ ಹಾಗೂ ಆರ್‌ಟಿಒ ಇನ್ಸ್ಪೆಕ್ಟರ್ ರವಿ ಬೀಸರಳ್ಳಿ ಅವರನ್ನು ಸ್ಥಳಕ್ಕೆ ಕರೆದು ಪರಿಶೀಲನೆ ನಡೆಸುವಂತೆ ಸೂಚಿಸಿದರು. ಸ್ಥಳೀಯರು ಇಷ್ಟು ಸಮಸ್ಯೆ ಎದುರಿಸುತ್ತಿದ್ದರೂ ಕ್ರಮ ವಹಿಸದ ಇಲಾಖೆಗಳ ಮೇಲೆ ಹರಿಹಾಯ್ದರು. ನಂತರ ಮಂಗಳವಾರ ಬೆಳಗ್ಗೆ ನಗರದಲ್ಲಿ ನಾಕಾಬಂದಿ ಮಾಡಿ ವಾಹನ ತಡೆಯಲಾಯಿತು.

ಕಾರವಾರ-ಕೈಗಾ ರಸ್ತೆಯಲ್ಲಿ 35 ಟನ್ ಭಾರದ ವಾಹನ ಓಡಾಡಬಹುದು ಎಂದು ಪಿಡಬ್ಲುಡಿ ತಿಳಿಸಿದೆ. ಈ ಸಂಬAಧ ಬೋರ್ಡ್ ಕೂಡ ಹಾಕಲಾಗಿದೆ. ಆದರೆ, ನಿಗದಿತ ಮಿತಿಗಿಂತ ಹೆಚ್ಚು ಭಾರದ ವಾಹನಗಳು ಓಡಾಡುತ್ತಿರುವುದು ಕಂಡುಬAದಿದೆ. ಇದರಿಂದ ಬಿಲ್ಟ್ ಸರ್ಕಲ್‌ನಲ್ಲಿ ನಾಕಾಬಂದಿ ಮಾಡಿ ಭಾರಿ ವಾಹನ ತಡೆಯಲಾಗಿದೆ.

ಗಿರೀಶ ಎಸ್.ವಿ.

ಡಿವೈಎಸ್‌ಪಿ ಕಾರವಾರ

........