ಲೊಕ್ಕನಹಳ್ಳಿ ಮಾನಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ಧ ಶಿಬಿರದಲ್ಲಿ ಜನರು ಆರೋಗ್ಯ ತಪಾಸಣೆಗೆ ಒಳಗಾದರು. ವೈದ್ಯರಾದ ಡಾ. ಶ್ರೇಯಾ ಫೈ, ಡಾ. ಪ್ರಭುಸ್ವಾಮಿ, ಪರಿಶೋಧಕರಾದ ಕುಪ್ಪುಸ್ವಾಮಿ, ಸಾಧಿಕ್, ಮನೋಜ್‌ಕುಮಾರ್, ಹೆಲ್ಫ್ ಏಜ್ ಇಂಡಿಯಾ ಸಂಯೋಜಕ ರಾಜಣ್ಣ ಇದ್ದರು.  
ಚಾಮರಾಜನಗರ

ಶಿಬಿರದಲ್ಲಿ 210 ಜನರ ಆರೋಗ್ಯ ತಪಾಸಣೆ

ಎ. ಆರ್. ರಘುರಾಮ
ಹನೂರು : ತಾಲೂಕಿನ ಲೊಕ್ಕನಹಳ್ಳಿಯಲ್ಲಿ ಹೆಲ್ಫ್ ಏಜ್ ಇಂಡಿಯಾ, ಮಾನಸ ಹಿರಿಯ ಪ್ರಾಥಮಿಕ ಶಾಲೆ, ಬೆಂಗಳೂರು ಶ್ರದ್ಧಾ ಐ ಕೇರ್ ಟ್ರಸ್ಟ್ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ಧ ಆರೋಗ್ಯ ಶಿಬಿರದಲ್ಲಿ 210 ಜನರು ಆರೋಗ್ಯ ತಪಾಸಣೆಗೆ ಒಳಗಾದರು.
ಈ ಶಿಬಿರಕ್ಕೆ ಲೊಕ್ಕನಹಳ್ಳಿ ಸೇರಿದಂತೆ ಬೆಳತ್ತೂರು, ಉದ್ದನೂರು, ಚನ್ನಾಲಿಂಗನಹಳ್ಳಿ, ಚಿಕ್ಕಮಾಲಾಪುರ, ಕಂಡಯ್ಯನಪಾಳ್ಯ, ಬೂದಿಪಡಗ, ಪಿ.ಜಿ ಪಾಳ್ಯ, ಒಡೆಯರಪಾಳ್ಯ, ಬೈಲೂರು ಹುಣಸೆಪಾಳ್ಯ ಹಾಗೂ ಈ ಭಾಗದ ಇನ್ನಿತರೆ ಕಡೆಗಳಿಂದ ಆಗಮಿಸಿದ 210 ಜನರು ಆರೋಗ್ಯ ತಪಾಸಣೆಗೆ ಒಳಗಾದರು. ಇವರಲ್ಲಿ 121 ಜನರು ಕಣ್ಣಿನ ತಪಾಸಣೆಗೆ ಒಳಗಾದರು. ನ್ಯೂನತೆಯುಳ್ಳ 14 ಜನರನ್ನು ಶಸ್ತ್ರ ಚಿಕಿತ್ರೆಗೆ ಕರೆದೊಯ್ಯಲಾಯಿತು. ಇನ್ನುಳಿದವರು ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಗಾಗಿ ಅಗತ್ಯ ಚಿಕಿತ್ಸೆ ಹಾಗೂ ಸಲಹೆ ಪಡೆದುಕೊಂಡರು.
ಒತ್ತಡದ ಜೀವನವೇ ಕಾರಣ:
ಹೆಲ್ಫ್ ಏಜ್ ಇಂಡಿಯಾ ಜಿಲ್ಲಾ ಸಂಯೋಜಕ ಪ್ರಕಾಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನುಷ್ಯ ಕೆಲಸದ ಒತ್ತಡ ಹಾಗೂ ಇನ್ನಿತರೆ ಕಾರಣಗಳಿಂದ ಆರೋಗ್ಯದ ಕಡೆ ಗಮನ ನೀಡುತ್ತಿಲ್ಲ. ಪರಿಣಾಮ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ಸಮಸ್ಯೆಯನ್ನು ಎದುರಿಸುವಂತಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನ್ಯೂನತೆಗಳಿದ್ದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯಿಸುವುದು ಸಲ್ಲದು. ಈ ದೆಸೆಯಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ. ಶ್ರೇಯಾ ಫೈ, ಡಾ. ಪ್ರಭುಸ್ವಾಮಿ, ಪರಿಶೋಧಕರಾದ ಕುಪ್ಪುಸ್ವಾಮಿ, ಸಾಧಿಕ್, ಮನೋಜ್‌ಕುಮಾರ್, ಹೆಲ್ಫ್ ಏಜ್ ಇಂಡಿಯಾ ಸಂಯೋಜಕ ರಾಜಣ್ಣ ಹಾಗೂ ಇನ್ನಿತರರು ಇದ್ದರು.