ಹನೂರಿನಲ್ಲಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಉಪ ತಹಸೀಲ್ದಾರ್ ನಾಗೇಂದ್ರ ಅವರಿಗೆ ಮನವಿ ಸಲ್ಲಿಸಿದರು. ಮಾದೇಶ್, ಫಾರೂಕ್‌ಪಾಷ, ಮಾರಿಯಪ್ಪ, ಚಿಕ್ಕತಾಯಮ್ಮ ಇತರರು ಇದ್ದರು.
ಹನೂರು: ಆರ್‌ಎಸ್‌ಎಸ್ ಸಂಘಟನೆಗೆ ಸಂವಿಧಾನಬದ್ಧವಾಗಿ ಕಡಿವಾಣ ಹಾಕುವಂತೆ ಒತ್ತಾಯಿಸಿ ಸೋಮವಾರ ದಲಿತ ಸಂಘರ್ಷ ಸಮಿತಿ (ಅಂಬೇಟ್ಕರ್ ವಾದ) ವತಿಯಿಂದ ಉಪ ತಹಸೀಲ್ದಾರ್ ನಾಗೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಿತಿಯ ತಾಲೂಕು ಸಂಚಾಲಕ ಭೈರನತ್ತ ಮಾದೇಶ್ ಮಾತನಾಡಿ, ಆರ್‌ಎಸ್‌ಎಸ್ ನೋಂದಣಿಯಾಗದ ಸಂಘಟನೆಯಾಗಿದ್ದು, ಬಿಜೆಪಿಗೆ ಬೆಂಬಲವಾಗಿ ನಿಂತಿದೆ. ಸಂವಿಧಾನವನ್ನು ಅವಮಾನಿಸುತ್ತಿರುವ ಆರ್‌ಎಸ್‌ಎಸ್ ಜಾತಿ, ಧರ್ಮದ ಹೆಸರಿನಲ್ಲಿ ಕಲಹ ಸೃಷ್ಟಿಸುವ ಬ್ರಾಹ್ಮಣ ಪಾರಮ್ಯದ ಸಂಘಟನೆಗೆ ಸಂವಿಧಾನ ಬದ್ಧವಾಗಿ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಸೀಲ್ದಾರ್ ನಾಗೇಂದ್ರ, ಜಿಲ್ಲಾಧಿಕಾರಿ ಅವರ ಮೂಲಕ ಮನವಿಯನ್ನು ಮುಖ್ಯಮಂತ್ರಿ ಅವರಿಗೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು.
ಸಮಿತಿ ಜಿಲ್ಲಾ ಸಂಚಾಲಕರಾದ ಫಾರೂಕ್ ಪಾಷ, ಮುರುಗೇಶ್, ತಾಲೂಕು ಸಂಚಾಲಕರಾದ ಮಾರಿಯಪ್ಪ, ವಾಸೀಂಪಾಷ, ಸೋಮಣ್ಣ, ಚಿಕ್ಕತಾಯಮ್ಮ, ಖಜಾಂಚಿ ನಾಗರಾಜು ಇತರರು ಇದ್ದರು.