ಕೊಳ್ಳೇಗಾಲ ತಾಲೂಕಿನ ಬಾಣೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಬಾಂಧವ್ಯ ಮೈತ್ರಿ ಸಮಿತಿ ಉದ್ಘಾಟನಾ ಸಮಾರಂಭ, ನಮ್ಮೂರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಶಾಕ್ಯ ಸುಂದರ್, ಸಿದ್ದಯ್ಯ, ಪ್ರದೀಪ್, ನಾಗರಾಜು, ಅರಕಲವಾಡಿ ನಾಗೇಂದ್ರ ಇತರರು ಇದ್ದರು.
ಕೊಳ್ಳೇಗಾಲ : ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣದ ಕ್ರಾಂತಿಯ ಸಂಕೇತ ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ತಿಳಿಸಿದರು.
ತಾಲೂಕಿನ ಬಾಣೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಬಾಂಧವ್ಯ ಮೈತ್ರಿ ಸಮಿತಿ ಉದ್ಘಾಟನಾ ಸಮಾರಂಭ, ನಮ್ಮೂರ ರತ್ನ ಪ್ರಶಸ್ತಿ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್ ಅವರು ಕಲಿತ ಶಿಕ್ಷಣವನ್ನು ಉತ್ತಮ ಸಮಾಜ ನಿರ್ಮಾಣಕ್ಕೆ ಬಳಕೆ ಮಾಡಿದ್ದಾರೆ. ತಾವು ಅವಮಾನ, ನೋವು ಉಂಡು ಇಂತಹ ಕಷ್ಟ ಮುಂದಿನ ತಲೆಮಾರಿಗೆ ಬರಬಾರದು ಎಂದು ಶಿಕ್ಷಣಕ್ಕೆ ಒತ್ತು ನೀಡಿದರು. ಅವರ ಆದರ್ಶ ಪಾಲಿಸಬೇಕು ಎಂದರು.
ಸಾಮಾಜಿಕ ಹೋರಾಟಗಾರ ಅರಕಲವಾಡಿ ನಾಗೇಂದ್ರ, ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ವಿಜೇತ ಶಿವಲಿಂಗಯ್ಯ, ಮೈಸೂರು ಪರಾಮಿ ಬಳಗ ಅಧ್ಯಕ್ಷ ಲಿಂಗರಾಜು, ಸಾಮಾಜಿಕ ಕಾರ್ಯಕರ್ತ ಶಾಗ್ಯ ಮಹೇಶ್, ಸಮಿತಿ ಸಂಸ್ಥಾಪಕ ಶಾಕ್ಯ ಸುಂದರ್, ಮುಖಂಡ ಸೋಮಣ್ಣ, ಮುಖ್ಯಶಿಕ್ಷಕ ಸಿದ್ದಯ್ಯ, ಪ್ರದೀಪ್, ನಾಗರಾಜು, ಮಾಗಳೀಪುರ ಸುದೇಶ್, ಬೆಳ್ಳಿಯಪ್ಪ ಇದ್ದರು.