ಶೂಟೌಟ್‌ನಿಂದ ಮೃತಪಟ್ಟ ಮರಿಯಾಮಂಗಲ ಗ್ರಾಮದ ಅಂಥೋನಿ ಸ್ವಾಮಿ ಮನೆಗೆ ನಿಶಾಂತ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು. ಪುಟ್ಟಣ್ಣ, ಪೊನ್ನಾಚಿ ಮಹದೇವಸ್ವಾಮಿ, ಸುರೇಶ್ ಇತರರು ಇದ್ದರು. 
ಚಾಮರಾಜನಗರ

ಶೂಟೌಟ್ ಪ್ರಕರಣದ ಸಿಬಿಐ ತನಿಖೆಗೆ ವಹಿಸಿರಿ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಯುವ ಮುಖಂಡ ನಿಶಾಂತ್ ಆಗ್ರಹ

ಹನೂರು:

ಶೂಟೌಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಯುವ ಮುಖಂಡ ನಿಶಾಂತ್ ಒತ್ತಾಯಿಸಿದರು.

ಕಾವೇರಿ ವನ್ಯಜೀವಿ ವಲಯದಲ್ಲಿ ಶೂಟೌಟ್‌ನಿಂದ ಮೃತಪಟ್ಟ ಲಾಸರ್‌ದೊಡ್ಡಿಯ ಡೇವಿಡ್ ಕುಮಾರ್, ಜಗನ್ನಾಥದೊಡ್ಡಿಯ ಪೀಟರ್ ಹಾಗೂ ಮರಿಯಾಮಂಗಲ ಗ್ರಾಮದ ಅಂಥೋಣಿ ಸ್ವಾಮಿ ಮನೆಗೆ ಭಾನುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆರ್ಥಿಕ ನೆರೆವು ನೀಡಿ ಮಾತನಾಡಿದರು.
ಅರಣ್ಯ ಇಲಾಖೆ ಸಿಬ್ಬಂದಿ ಮೂವರನ್ನು ಗುಂಡಿಕ್ಕಿ ಕೊಂದಿರುವುದು ನಿಜಕ್ಕೂ ಖಂಡನೀಯ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನೊಂದ ಕುಟುಂಬಕ್ಕೆ ಸೂಕ್ತ ನ್ಯಾಯ ದೊರಕಬೇಕಾದರೆ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು. ಮಕ್ಕಳ ಶಿಕ್ಷಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದರು.
ಕೊಳ್ಳೇಗಾಲ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಪುಟ್ಟಣ್ಣ, ಮುಖಂಡರಾದ ಪೊನ್ನಾಚಿ ಮಹದೇವಸ್ವಾಮಿ, ಗುರುಮಲ್ಲಣ್ಣ, ಸುರೇಶ್, ಬಸಪ್ಪ, ಸಿದ್ದಪ್ಪಾಜಿ ಇತರರು ಇದ್ದರು.