ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಶಿಕ್ಷಕರನ್ನು ಸನ್ಮಾನಿಸಲಾಯಿತು. ರೇವಣ್ಣ ಸ್ವಾಮಿ, ನಾಗೇಶ್, ಅಂಕಯ್ಯ, ಜಾಯ್ಸ್ ಎಲ್.ಮೆನೇಜಸ್, ಟಿ.ಡಿ.ಸುಂದರೇಶ್, ಎಸ್.ಮಲ್ಲಮ್ಮ, ಅಂಕಶೆಟ್ಟಿ, ಮಹೇಶ್, ರುದ್ರಾಂಬಿಕೆ, ನಂಜುಂಡಸ್ವಾಮಿ ಇದ್ದರು.  
ಚಾಮರಾಜನಗರ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಗುರುವಂದನೆ

ಎ.ಎಸ್.ಮಣಿಕಂಠ

ಪ್ರಮುಖ ಮುಖ್ಯಾಂಶಗಳು

  • ಗೂಳಿಪುರ ಶ್ರೀ.ವಿ.ಮಹಾಂತದೇವರ ಸರ್ಕಾರಿ ಪ್ರೌಢಶಾಲೆ
  • 2008-09 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಆಯೋಜನೆ
  • ಹಳೆಯ ನೆನಪುಗಳ ಮೆಲುಕು
ಚಾಮರಾಜನಗರ: ಸುಮಾರು 17 ವರ್ಷಗಳ ಹಿಂದೆ ಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿಗಳು ವಿಧ್ಯೆ ಕಲಿಸಿದ ಗುರುಗಳ ಸೇವೆಯನ್ನು ನೆನೆದು ಗುರುವಂದನೆ ಸಲ್ಲಿಸಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗೂಳಿಪುರ ಶ್ರೀ.ವಿ.ಮಹಾಂತದೇವರ ಸರ್ಕಾರಿ ಪ್ರೌಢಶಾಲೆಯ 2008-09 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಭಾನುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅಂದು ಸೇವೆ ಸಲ್ಲಿಸಿದ್ದ ಮುಖ್ಯ ಶಿಕ್ಷಕ ರೇವಣ್ಣ ಸ್ವಾಮಿ, ಸಹಶಿಕ್ಷಕರಾದ ನಾಗೇಶ್, ಅಂಕಯ್ಯ, ಜಾಯ್ಸ್ ಎಲ್.ಮೆನೇಜಸ್, ಟಿ.ಡಿ.ಸುಂದರೇಶ್, ಎಸ್.ಮಲ್ಲಮ್ಮ, ಅಂಕಶೆಟ್ಟಿ, ಮಹೇಶ್, ರುದ್ರಾಂಬಿಕೆ, ನಂಜುಂಡಸ್ವಾಮಿ ಶಿಕ್ಷಕರನ್ನು ಸನ್ಮಾನಿಸಿ, ಗುರುಕಾಣಿಕೆ ಸಲ್ಲಿಸುವ ಮೂಲಕ ಗೌರವಸಲ್ಲಿಸಿದರು.
ಈ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಮಾತನಾಡಿ, ತಾವು ಅಂದು ಕಲಿತ ಪಾಠದಿಂದ ಇಂದು ರೂಪಿಸಿಕೊಂಡಿರುವ ಜೀವನ ಮಹತ್ವದ ಕುರಿತು ವಿವರಿಸಿದರು. ಹಿಂದೆ ಶಿಕ್ಷಕರನ್ನು ನಡೆಸಿಕೊಂಡಿದ್ದ ರೀತಿಯನ್ನು ನೆನಪುಮಾಡಿಕೊಂಡು ಕ್ಷಮೆಯಾಚಿಸಿದರು. ಶಿಕ್ಷಕರಾಗಿ, ಉದ್ಯಮಿಯಾಗಿ, ಉಪನ್ಯಾಸಕರಾಗಿ, ವಿವಿಧ ಕಂಪನಿಗಳಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿರುವ ವಿದ್ಯಾರ್ಥಿಗಳು ಗುರುಗಳ ಮುಂದೆ ಮಕ್ಕಳಾದರು. ಇನ್ನೂ ಮದುವೆಯಾಗದ ಹಳೇಯ ವಿದ್ಯಾರ್ಥಿಯೊಬ್ಬ ರೈತರಿಗೆ ಹೆಣ್ಣು ಕೊಡುವಂತೆ ಮನವಿ ಮಾಡಿದ್ದು, ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡಿತು ಒಟ್ಟಾರೆಯಾಗಿ ಗುರುವಂದನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ಕುಟುಂಬಸ್ಥರು ಹಾಜರಿದ್ದರು.
ಗೂಳಿಪುರ ಗ್ರಾಮದ ಬ್ರಿಗೇಡಿಯರ್ ಶಿಮಲ್ಲಪ್ಪ ಅವರು ವಿ.ಮಾಹಾಂತದೇವರು ಸರ್ಕಾರಿ ಪ್ರೌಢಶಾಲೆಗೆ ತಮ್ಮ ಜಮೀನನ್ನು ದಾನವನ್ನು ನೀಡಿದ್ದರು. ಅಂತವರ ಸಮಾಜಸೇವೆಯಿಂದ ನಮ್ಮಂತಹ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಕಲಿಯುವಂತಾಯಿತು. ಈ ಕಾರ್ಯಕ್ರಮ ನಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು.
-ಕುಮಾರ್ ಮೇಲಾಜಿಪುರ, ಹಳೆಯ ವಿದ್ಯಾರ್ಥಿ