ಗುಂಡ್ಲುಪೇಟೆ ುಂದ ತಾಲೂಕಿನ ಅಣ್ಣೂರ ಕೇರಿ ಗ್ರಾಮದಲ್ಲಿ ಆಯೋಜಿಸಿದ್ದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಮುಖೇಶ್ ಉದ್ಘಾಟಿಸಿದರು. ಮಹೇಶ್, ಜಯಣ್ಣ ಇದ್ದರು. 
ಚಾಮರಾಜನಗರ

ತಂಬಾಕು ಸೇವನೆಯಿಂದ ಕುಟುಂಬದ ಮೇಲೆ ದುಷ್ಪರಿಣಾಮ

ಗುಂಡ್ಲುಪೇಟೆ: ತಂಬಾಕು ಸೇವನೆ ಮಾಡುವ ವ್ಯಕ್ತಿಯ ವೈಯಕ್ತಿಕ ಹಾಗೂ ಕುಟುಂಬದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಮುಖೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಅಣ್ಣೂರ ಕೇರಿ ಹಾಗೂ ಬನ್ನಿತಾಳಪುರ ಗ್ರಾಮಗಳಲ್ಲಿ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಸಮಾಜದ ಹಾಗೂ ಸಮುದಾಯಗಳ ಅಭಿವೃದ್ಧಿಗೆ ಜನರನ್ನು ವ್ಯಸನಗಳಿಂದ ಮುಕ್ತವಾಗಿಸಲು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ಹೇಳಿದರು.
ಪ್ರಾಥಮಿಕ ಶಾಲೆಯ ಶಿಕ್ಷಕ ಮಹೇಶ್ ಮಾತನಾಡಿ, ಶೋಕಿಗಾಗಿ ಆರಂಭಿಸಿದ ಚಟಗಳು ಮುಂದೆ ವ್ಯಸನಗಳಾಗುತ್ತವೆ. ತಂಬಾಕು ಸೇವನೆ ಮಾಡುವುದರಿಂದ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವಿದೆ. ಇತ್ತೀಚಿನ ದಿನಗಳಲ್ಲಿ ಫೋನ್ ಬಳಕೆ ಮಾಡುವುದು ಮಕ್ಕಳಿಗೆ ದುಶ್ಚಟವಾಗಿ ಪರಿಣಮಿಸಿದೆ. ಪಾಲಕರು ತಮ್ಮ ಮಕ್ಕಳನ್ನು ಎಚ್ಚರಿಕೆಯಿಂದ ಗಮನಿಸುವ ಮೂಲಕ ವ್ಯಸನಮುಕ್ತರನ್ನಾಗಿಸಬೇಕು ಎಂದು ಹೇಳಿದರು.
ವಲಯದ ಮೇಲ್ವಿಚಾರಕ ಜಯಣ್ಣ, ಕೃಷಿ ಮೇಲ್ವಿಚಾರಕ ಮಹದೇವಪ್ರಸಾದ್, ಸೇವಾ ಪ್ರತಿನಿಧಿ ಚಿಕ್ಕತಾಯಮ್ಮ, ನಾಗಮ್ಮ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.