ಗುಂಡ್ಲುಪೇಟೆ ಪಟ್ಟಣದಲ್ಲಿ ಆಟೋಗೆ ತುಂಬಿಸಿದ್ದ ಅನ್ನಭಾಗ್ಯ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 
ಚಾಮರಾಜನಗರ

ಆಟೋಗಳಲ್ಲಿ ಸಾಗಿಸಲೆತ್ನಿಸುತ್ತಿದ್ದ ಪಡಿತರ ಅಕ್ಕಿ ವಶ

ಗುಂಡ್ಲುಪೇಟೆ: ಸಾರ್ವಜನಿಕರ ಮಾಹಿತಿಯಿಂದ ಪಟ್ಟಣದ ಹಳೇ ಆಸ್ಪತ್ರೆ ಸಮೀಪ ಆಟೋಗಳಿಗೆ ತುಂಬಿ ಸಾಗಿಸಲೆತ್ನಿಸುತ್ತಿದ್ದ ಅನ್ನಭಾಗ್ಯ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗುರುವಾರ ರಾತ್ರಿ ಪಟ್ಟಣದ ಹಳೇ ಆಸ್ಪತ್ರೆ ಬಳಿಯ ಅಮೀರ್ ಜಾನ್ ರಸ್ತೆಯ ಗಲ್ಲಿಯಲ್ಲಿ ಆಟೋಗಳಿಗೆ ಮೂಟೆಗಳನ್ನು ತುಂಬಿಸುತ್ತಿರುವ ಬಗ್ಗೆ ಸಂಶಯಗೊಂಡ ಸಾರ್ವಜನಿಕರು ಹೊಯ್ಸಳ ಪೊಲೀಸರಿಗೆ ಕರೆಮಾಡಿ ಮಾಹಿತಿ ನೀಡಿದರು.
ಸ್ಥಳಕ್ಕೆ ತೆರಳಿದ ಪೊಲೀಸರನ್ನು ಕಂಡ ಕೂಡಲೇ ಆಟೋಗಳಿಗೆ ಚೀಲ ತುಂಬುತ್ತಿದ್ದ ಮೂವರು ಪರಾರಿಯಾದ ಹಿನ್ನೆಲೆಯಲ್ಲಿ ಚೀಲಗಳನ್ನು ಪರಿಶೀಲಿಸಿದಾಗ ಅದರಲ್ಲಿ ಅನ್ನಭಾಗ್ಯ ಯೋಜನೆಯ 40-45 ಚೀಲ ಹಾಗೂ ಪಕ್ಕದ ಮನೆಯಲ್ಲಿಯೂ 40-50 ಚೀಲಗಳಷ್ಟು ಅಕ್ಕಿ ಇರುವುದು ಕಂಡುಬಂದಿದೆ.
ಕೂಡಲೇ ಆಟೋವನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.