ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಆರ್.ಕೆ.ಮಧು ಸಸಿ ನೆಡುವ ಮೂಲಕ ಉದ್ಘಾಟಿಸಿದರು.ಪ್ರಭಾರ ಮುಖ್ಯಶಿಕ್ಷಕ ನಾಗರಾಜ ಶರ್ಮನ್ ಮತ್ತಿತರರಿದ್ದರು.
ಗುಂಡ್ಲುಪೇಟೆ: ಗಿಡ ಮರಳು ನಮಗೆ ಲ ನೀಡುತ್ತವೆ ಎಂಬ ಮನಸ್ಸಿನಿಂದ ಬೆಳೆಸದೆ ಪ್ರಾಣಿ, ಪಕ್ಷಿಗಳಿಗೆ ಹಕ್ಕಿದೆ ಎಂಬ ಭಾವನೆಯಿಂದ ಬೆಳೆಸಬೇಕು ಎಂದು ಛಾಯಾಗ್ರಾಹಕ ಆರ್.ಕೆ.ಮಧು ಹೇಳಿದರು.
ತಾಲೂಕಿನ ಕಬ್ಬಳ್ಳಿ ಗ್ರಾಮದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ವಿಶ್ವ ಪರಿಸರ ದಿನದಲ್ಲಿ ಮಾತನಾಡಿದರು.
ಭಾರತ ಪರಿಸರದಲ್ಲಿ 90 ಲಕ್ಷ ಜೀವರಾಶಿಗಳು ಇದ್ದು ಮಾನವ ಅದರ ಒಂದು ಭಾಗ ಮಾತ್ರ. ಆದರೆ ನಾವು ನಮಗೆ ಎಂಬ ಸ್ವಾರ್ಥದಿಂದ ನಾವು ಪರಿಸರವನ್ನು ಹಾಳು ಮಾಡುತ್ತಿದ್ದೇವೆ ಪರಿಸರದಲ್ಲಿ ಎಲ್ಲ ಜೀವಿಗಳಿಗೂ ಜೀವಿಸುವ ಹಕ್ಕು ಇದೆ ಎಂದರು.
ಶಾಲೆಯ ನಿವೃತ್ತ ಪ್ರಾಂಶುಪಾಲ ಸಿದ್ದರಾಜಪ್ಪ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಸುಂದರ ಪರಿಸರಕ್ಕೆ ಕೈಜೋಡಿಸಬೇಕು, ಮಕ್ಕಳು ಬೆಳೆಯಲು ಸುಂದರ ಸ್ವಚ್ಛ ಪರಿಸರ ಮುಖ್ಯ ಎಂದರು.
ಶಾಲಾ ಆವರಣದಲ್ಲಿ ಹಲಸು, ಸೀಬೆ, ಕರಿಬೇವು, ಶ್ರೀಗಂಧ, ಹಾಗೂ ಬಾದಾಮಿ ಗಿಡಗಳನ್ನು ನೆಡಲಾಯಿತು.
ಪ್ರಭಾರ ಮುಖ್ಯಶಿಕ್ಷಕ ನಾಗರಾಜ ಶರ್ಮನ್, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.