ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸೈಕಲ್ ತುಳಿಯುವ ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸುರೇಶ್, ಗುರುರಾಜು. ಎಲ್. ಸುರೇಶ್, ಮಂಜುನಾಥ್, ಪುಷ್ಪಲತಾ, ಲೀಲಾ ಇದ್ದರು. 
ಚಾಮರಾಜನಗರ

ಸೈಕಲ್ ಬಳಕೆಯಿಂದ ಆರೋಗ್ಯ, ಪರಿಸರ ಸುರಕ್ಷಿತ

ಗುಂಡ್ಲುಪೇಟೆ: ಮೈ ಭಾರತ್ ಕೇಂದ್ರ, ಚಾಮರಾಜನಗರದ ರಂಗಸೌರಭ ಸಂಸ್ಥೆಗಳ ವತಿಯಿಂದ ತಾಲೂಕಿನ ಬೇಗೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಯಿತು.
ಜಿಲ್ಲಾ ಪಂಚಾಯಿತಿಯ ಜಿಲ್ಲಾ ತರಬೇತಿ ಜಿಲ್ಲಾ ಸಂಯೋಜಕ ಸುರೇಶ್ ಮಾತನಾಡಿ, ಸೈಕ್ಲಿಂಗ್ ಉತ್ತಮ ವ್ಯಾಯಾಮವಾಗಿದ್ದು ದೇಹವನ್ನು ಸದೃಢವಾಗಿಡುವುದರ ಜತೆಗೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ನಿಯಮಿತವಾಗಿ ಸೈಕಲ್ ಓಡಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ. ಇಂದಿನ ದಿನಗಳಲ್ಲಿ ವಾಹನಗಳ ಬಳಕೆ ಹೆಚ್ಚಾಗುತ್ತಿರುವುದರಿಂದ ಮಾಲಿನ್ಯವೂ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸಾಧ್ಯವಾದಷ್ಟು ಕಡಿಮೆ ದೂರದ ಪ್ರಯಾಣಗಳಿಗೆ ಸೈಕಲ್ ಬಳಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಇಂಧನ ಉಳಿತಾಯವಾಗುವುದರ ಜತೆಗೆ ಆರೋಗ್ಯ ಮತ್ತು ಪರಿಸರವೂ ಸುರಕ್ಷಿತವಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸೈಕಲ್ ತುಳಿಯುವ ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಂಗಸೌರಭ ಸಂಸ್ಥೆಯ ಕಾರ್ಯದರ್ಶಿ ಗುರುರಾಜು, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಎಲ್.ಸುರೇಶ್, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ನಿಲಯಪಾಲಕರಾದ ಮಂಜುನಾಥ್, ರಂಗಭೂಮಿ ಕಲಾವಿದೆ ಪುಷ್ಪಲತಾ, ಉಪ ಪ್ರಾಂಶುಪಾಲೆ ಲೀಲಾ, ಶಾಲೆಯ ಸಿಬ್ಬಂದಿ ಎಚ್.ಎನ್. ಸಿದ್ದರಾಜು, ಫಾತಿಮುನೀಷಾ, ಪೂರ್ಣಚಂದ್ರ ತೇಜಸ್ವಿನಿ, ಪುಷ್ಪಾ, ಲೋಕೇಶ್, ಪುಟ್ಟಪ್ಪ, ಪ್ರೇಮಾಂಜಲಿ ಸೇರಿದಂತೆ ಹಲವರು ಇದ್ದರು.