crime 
ಚಾಮರಾಜನಗರ

ಗುಂಡ್ಲುಪೇಟೆ ಪೊಲೀಸರಿಂದ 17 ಜೂಜುಕೋರರ ಬಂಧನ

ಗುಂಡ್ಲುಪೇಟೆ: ಪ್ರತ್ಯೇಕವಾಗಿ ಎರಡು ಕಡೆ ಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಪಟ್ಟಣ ಪೊಲೀಸರು 17 ಜೂಜುಕೋರರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸರ್ಕಲ್ ಇನ್ಸ್‌ಪೆಕ್ಟರ್ ಎನ್.ಜಯಕುಮಾರ್ ನೇತೃತ್ವದ ಪೊಲೀಸರ ತಂಡ ತಾಲೂಕಿನ ತೆಂಕಲಹುಂಡಿ ಮತ್ತು ಮಡಹಳ್ಳಿ ಗ್ರಾಮಗಳ ನಡುವೆ ಇರುವ ಹುಲಿಯಮ್ಮನ ಗುಡ್ಡದ ಬಳಿ ಜೂಜಾಡುತ್ತಿದ್ದ 9 ಜನರನ್ನು ವಶಕ್ಕೆ ಪಡೆದು, ಪಣಕ್ಕಿಟ್ಟಿದ್ದ 1,1,230 ರೂ.ಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಪಟ್ಟಣದ ಹೊರವಲಯದ ಬಯಲು ಪ್ರದೇಶದಲ್ಲಿ ಜೂಜಾಡುತ್ತಿದ್ದ 8 ಜನರನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ 25 ಸಾವಿರ ರೂ. ನಗದನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ನರೇಶ್ ಕುಮಾರ್, ಸಿಬ್ಬಂದಿ ಕಿಶೋರ್, ಶಿವರಾಜು, ನಟೇಶ್, ನಾಗೇಶ್, ಮಣಿ, ಬಸವ, ನವೀನ ಹಾಗೂ ಚಾಲಕ ಜಯಕುಮಾರ್ ಭಾಗವಹಿಸಿದ್ದರು.