ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಆಯೋಜಿಸಿದ್ದ ಗೃಹಲಕ್ಷ್ಮಿ ದಿನದಲ್ಲಿ ಮಹಿಳೆಯರು ಗಿಡವನ್ನು ನೆಟ್ಟು ನೀರೆರೆದರು. 
ಚಾಮರಾಜನಗರ

ಕುಂತೂರಿನಲ್ಲಿ ಗಿಡ ನೆಟ್ಟು ಗೃಹಲಕ್ಷ್ಮಿ ಸಂಭ್ರಮ

ಕೊಳ್ಳೇಗಾಲ: ತಾಲೂಕಿನ ಕುಂತೂರು ಗ್ರಾಮದಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಗೃಹಲಕ್ಷ್ಮಿ ದಿನ ಆಯೋಜಿಸಲಾಗಿತ್ತು.
ಈ ವೇಳೆ 31 ಗೃಹಿಣಿಯರಿಂದ 31 ಗಿಡಗಳನ್ನು ನೆಡಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿಯನ್ನು ಇಲ್ಲಿಯವರೆವಿಗೂ ಸಮರ್ಪಕವಾಗಿ ನಡೆಸಿಕೊಂಡು ಬಂದಿದೆ. ಗೃಹಲಕ್ಷ್ಮಿ ಯೋಜನೆ ಆರ್ಥಿಕವಾಗಿ ಬಡ ಕುಟುಂಬಗಳಿಗೆ ನೆರವಾಗಿದೆ. ರಾಜ್ಯದ ಕಾರ್ಯಕ್ರಮಗಳು ಇತರ ರಾಜ್ಯಗಳಲ್ಲಿಯೂ ಸಹಾ ಅನುಷ್ಠಾನಗೊಳಿಸುತ್ತಿರುವುದು ಕಾಣ ಬಹುದಾಗಿದೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರು, ತಾಲೂಕು ಸಮಿತಿಯ ಸದಸ್ಯರಾದ ಲಿಂಗರಾಜು, ನಿರಂಜನ್, ಶ್ರೀನಿವಾಸಮೂರ್ತಿ, ರಾಜುಗೌಡ, ಕೃಷ್ಣವೇಣಿ, ಸಹನ ಪ್ರಿಯ, ನಾರಾಯಣ, ಸಿಬಕತ್ ಉಲ್ಲಾ, ಪರಮೇಶ್, ಪರಶಿವ, ಶಾಂತರಾಜು, ಮಾಜ್‌ಉಲ್ಲಾ, ತಾಪಂ ಪ್ರಭಾರ ಇಒ ಕುಮಾರ್, ಸಿಡಿಪಿಒ ಅಂಬಿಕಾ ಇತರರು ಇದ್ದರು.