ಗುಂಡ್ಲುಪೇಟೆ ತಾಲೂಕಿನ ಹೂರದಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮವನ್ನು ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ ಉದ್ಘಾಟಿಸಿದರು. ಎಂ.ಪಿ.ಸುನಿಲ್. ಎಸ್.ಎಂ.ಮಲ್ಲಿಕಾರ್ಜುನ. ಮೃತ್ಯುಂಜಯಪ್ಪ , ಸವಿತಾ ಇತರರು ಇದ್ದರು. 
ಚಾಮರಾಜನಗರ

ಸಾಮೂಹಿಕ ಲಕ್ಷ್ಮೀ ಪೂಜೆ ಕಾರ್ಯಕ್ರಮ

ಎ. ಆರ್. ರಘುರಾಮ
ಗುಂಡ್ಲುಪೇಟೆ: ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಮೂಡುಗೂರು ಮಠದ ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ ಹೇಳಿದರು.
ತಾಲೂಕಿನ ಹೂರದಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,
ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಗ್ರಾಮ ಸುಭಿಕ್ಷೆಗಾಗಿ
ಹಮ್ಮಿಕೊಂಡಿದ್ದ ಸಾಮೂಹಿಕ ಲಕ್ಷ್ಮೀಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಸರ್ಕಾರಗಳು ಮಾಡದೆ ಇರುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಗಾಂಧೀಜಿ ಕನಸನ್ನು ನನಸು ಮಾಡುತ್ತಿದೆ. ಪ್ರತಿ ಗ್ರಾಮವೂ
ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಪ್ರಕೃತಿ ಪರವಾಗಿ ಕೆಲಸವನ್ನು ಮಾಡಿಕೊಂಡು ಬರುತ್ತಿರುವುದು ಬಹಳ ವಿಶೇಷ ಎಂದರು.
ಚಾಮುಲ್ ನಿರ್ದೇಶಕ ಎಂ.ಪಿ. ಸುನಿಲ್ ಮಾತನಾಡಿ, ಧರ್ಮಸ್ಥಳ ಸಂಸ್ಥೆಯು ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ ಎಂದರು. ಆರ್ಥಿಕ ಉನ್ನತೀಕರಣದೊಂದಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಬೆಳವಣಿಗೆ ಆದರೆ ಮಾತ್ರ ಹಳ್ಳಿಗಳ ಉದ್ಧಾರ ಸಾಧ್ಯ. ಈ ನಿಟ್ಟಿನಲ್ಲಿ ಧಾರ್ಮಿಕವಾಗಿ ಎಲ್ಲರೂ ಒಗ್ಗೂಡುವುದು ಬಹಳ ಮುಖ್ಯ ಎಂದರು.
ವೀರಶೈವ ಮಹಾಸಭಾ ನಿರ್ದೇಶಕ ಎಸ್. ಎಂ. ಮಲ್ಲಿಕಾರ್ಜುನ, ಮೊರಾರ್ಜಿ ಶಾಲೆ ಪ್ರಾಂಶುಪಾಲೆ ಸವಿತಾ, ಎಪಿಎಂಸಿ ಮಾಜಿ ಅಧ್ಯಕ್ಷ ಮೃತ್ಯುಂಜಯಪ್ಪ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಮುಖಂಡರಾದ ಕಲ್ಲಳ್ಳಿ ಮಹೇಶ, ಅಂಗಡಿ ಮಲ್ಲು, ಮಲ್ಲಿಕಾರ್ಜುನ, ಕಲ್ಲಹಳ್ಳಿ ಕುಮುದ, ಕಬ್ಬಹಳ್ಳಿ ಮಹದೇವಸ್ವಾಮಿ ರಾಮಣ್ಣ, ಗುರುಸ್ವಾಮಣ್ಣ ಇತರರು ಹಾಜರಿದ್ದರು.