ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಅಧಿಕಾರಿಗಳು
ಗುಂಡ್ಲುಪೇಟೆ : ತಾಲೂಕಿನ ಬೇಗೂರು ಗ್ರಾಮದ ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಬುಧವಾರ ಚಾಮರಾಜನಗರದ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು.
ಶಿಬಿರದಲ್ಲಿ ರಕ್ತದ ಮಹತ್ವ, ಗುಂಪುಗಳು ಹಾಗೂ ರಕ್ತದಾನದಿಂದ ಆಗುವ ಉಪಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಸಂಸ್ಥೆಯ ಅಧಿಕಾರಿಗಳು, ಚಾಮರಾಜನಗರದ ಬಸವರಾಜೇಂದ್ರ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ 35 ಜನರು ರಕ್ತದಾನ ಮಾಡಿದರು.
ಸಂಸ್ಥೆಯ ಪ್ರಾಚಾರ್ಯ, ಸಿ.ಆರ್.ಸುಚಿತ್ರಾ, ಆಡಳಿತಾಧಿಕಾರಿ ರಜನಿ, ತರಬೇತಿ ಅಧಿಕಾರಿಗಳಾದ ಎಚ್.ಎಸ್.ಪ್ರಸಾದ್, ಡಾ.ಮಂಜುನಾಥ ನಾಯಕ್ ಹಾಗೂ ಸಿಬ್ಬಂದಿ ಇದ್ದರು.