ಕೊಳ್ಳೇಗಾಲ ಪಟ್ಟಣದ ಆದರ್ಶನಗರ ಬಡಾವಣೆಯಲ್ಲಿ ಕಳ್ಳತನ ನಡೆದಿದ್ದ ಜಯಪ್ಪ ಎಂಬುವರ ಮನೆಗೆ ಎಎಸ್ಪಿ ಎಂ.ಎನ್ ಶಶಿಧರ ಭೇಟಿ ನೀಡಿ ಪರಿಶೀಲಿಸಿದರು. ಮೋಹನ್, ರವೀಂದ್ರ, ವರ್ಷಾ ಇತರರು ಇದ್ದಾರೆ.
ಕೊಳ್ಳೇಗಾಲ: ಪಟ್ಟಣದ ಆದರ್ಶನಗರ ಬಡಾವಣೆಯಲ್ಲಿ ಬುಧವಾರ ರಾತ್ರಿ ಕಳ್ಳರು ಮನೆಯೊಂದರ ಬಾಗಿಲು ಒಡೆದು ಚಿನ್ನ-ಬೆಳ್ಳಿ ಆಭರಣಗಳು, ನಗದು ಕದ್ದೊಯ್ದಿದ್ದಾರೆ.
ಗಾರೆ ಕೆಲಸದ ಮೇಸ್ತ್ರಿ ವೃತ್ತಿ ಮಾಡುತ್ತಿರುವ ಜಯಪ್ಪ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು. 101 ಗ್ರಾಂ ಚಿನ್ನಾಭರಣ, ಬೆಳ್ಳಿ ಪದಾರ್ಥಗಳು ಸೇರಿದಂತೆ 80 ಸಾವಿರ ರೂ. ಕಳವಾಗಿದೆ. ಜಯಪ್ಪ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಕಾರಣ ಆದರ್ಶ ನಗರದ ಮನೆಗೆ ಬೀಗ ಹಾಕಿ ಭೀಮನಗರದಲ್ಲಿರುವ ತಮ್ಮ ಹಳೆಯ ಮನೆಗೆ ಜು.6 ರಂದು ತೆರಳಿದ್ದರು. ಬಳಿಕ ಜು.10ರಂದು ಮನಗೆ ಹಿಂದಿರುಗಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆ ಬಾಗಿಲು ಒಡೆದು ಚಿನ್ನಾಭರಣ, ಬೆಳ್ಳಿ ಪದಾರ್ಥ, ನಗದು ದೋಚಿದ್ದಾರೆ ಎಂದು ಜಯಪ್ಪ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಹಿತಿ ತಿಳಿದ ಚಾಮರಾಜನಗರ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೊಳ್ಳೇಗಾಲ ಉಪವಿಭಾಗ ಡಿವೈಎಸ್ಪಿ ಮೋಹನ್, ಸಿಪಿಐ ರವೀಂದ್ರ, ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ, ಅಪರಾಧ ವಿಭಾಗದ ಪಿಎಸ್‌ಐ ಉಮಾವತಿ ಚಲುವರಾಜ್ ಇದ್ದರು.