ಸಂಗ್ರಹ ಚಿತ್ರ 
ಚಾಮರಾಜನಗರ

ಚಿರತೆ ದಾಳಿಗೆ ಮೇಕೆ ಬಲಿ

ಲೋಕೇಶ್ ಮನು. ಡಿ
ಯಳಂದೂರು: ತಾಲೂಕಿನ ಗೌಡಹಳ್ಳಿ ಗ್ರಾಮದ ಚಿರತೆಯೊಂದು ಭಾನುವಾರ ರಾತ್ರಿ ಎರಡು ಕರುಗಳ ಮೇಲೆ ದಾಳಿ ಮಾಡಿದ್ದಲ್ಲದೆ, ಮೇಕೆಯನ್ನು ಹೊತ್ತೊಯ್ದು ಅರ್ಧಂಬರ್ಧ ತಿಂದಿದೆ.
ಗೌಡಹಳ್ಳಿ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮವಾಗಿದ್ದು, ಸಿದ್ದೇಗೌಡ ಮನೆಯ ಹಿಂದೆ ಇರುವ ಕೊಟ್ಟಿಗೆಯಲ್ಲಿ ಹಸು, ಕರು ಹಾಗೂ ಮೇಕೆಯನ್ನು ಕಟ್ಟಿದ್ದರು. ತಡರಾತ್ರಿ ಕೊಟ್ಟಿಗೆಗೆ ದಾಳಿ ಇಟ್ಟ ಚಿರತೆ ಎರಡು ಕರುಗಳ ಮೇಲೆ ದಾಳಿ ನಡೆಸಿದೆ. ಮೇಕೆಯನ್ನು ಕೊಂದು ಹೊತ್ತುಯ್ದು ದೂರದ ಜಮೀನಿನಲ್ಲಿ ಅರ್ಧಂಬರ್ಧ ತಿಂದು ಹಾಕಿದೆ.
ಈ ಸಂಬಂಧ ಅರಣ್ಯ ಇಲಾಖೆಯ ಸಿಬ್ಬಂದಿ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಸಂತ್ರಸ್ತ ಮಾಲೀಕನಿಗೆ ಸೂಕ್ತ ಪರಿಹಾರ, ಚಿರತೆ ಸೆರೆಗೆ ಬೋನನ್ನು ಇಡುಯುವ ಭರವಸೆ ನೀಡಿದ್ದಾರೆ.