- ಶಾಸಕ ಗಣೇಶ್ ಪ್ರಸಾದ್‌ಗೆ ಮಾಜಿ ಶಾಸಕ ಸಲಹೆ
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕಿಂತ ಅಭಿವೃದ್ಧಿ ವಿಚಾರಕ್ಕೆ ಆದ್ಯತೆ ನೀಡಬೇಕು ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಕುಟುಕಿದ್ದಾರೆ.
ಗುಂಡ್ಲುಪೇಟೆ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ಶಾಸಕ ಗಣೇಶ್ ಪ್ರಸಾದ್, ಕೆರೆಗಳಿಗೆ ನೀರು ತುಂಬಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಕೆಲವರು ಗೊಂದಲ ಸೃಷ್ಟಿಸುವ ಉದ್ದೇಶದಿಂದ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಆದರೆ, ತಾಲೂಕಿನ ಬಹುತೇಕ ಕೆರೆಗಳು ಬರಿದಾಗಿವೆ. ತಾಲೂಕಿನ ಎಷ್ಟು ಕೆರೆಗಳಿಗೆ ನೀರು ಬಂದಿದೆ ಎಂದು ಸಾರ್ವಜನಿಕರೇ ಪ್ರಶ್ನಿಸುತ್ತಿದ್ದಾರೆ. ಜನರ ನಿರೀಕ್ಷೆ ಪ್ರಚಾರವಲ್ಲ, ಶಾಶ್ವತ ಅಭಿವೃದ್ಧಿ ಮತ್ತು ಕೆರೆಗಳಿಗೆ ನೀರು ಹರಿಸುವಂತಹ ಪರಿಣಾಮಕಾರಿ ಕೆಲಸ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಮತದಾರರು ಆದೇಶವನ್ನು ಗೌರವಿಸಿ, ಆರೋಪ-ಪ್ರತ್ಯಾರೋಪಗಳಿಗಿಂತ ಅಭಿವೃದ್ಧಿಗೆ ಆದ್ಯತೆ ನೀಡಿದರೆ ತಾಲೂಕಿನ ಜನರು ಸ್ವಾಗತಿಸುತ್ತಾರೆ. ಮೂರು ವರ್ಷಗಳಿಂದ ತಾಲೂಕಿನ ಯಾವುದೇ ಕೆರೆಗಳಿಗೆ ನೀರು ತುಂಬಿಸಿಲ್ಲ ಎಂದು ಜನರಿಗೆ ಸತ್ಯ ತಿಳಿದಿದೆ. ಇನ್ನಾದರೂ ಅಭಿವೃದ್ಧಿಯತ್ತ ಗಮನಹರಿಸಿ ಎಂದು ಆಗ್ರಹಿಸಿದ್ದಾರೆ.