ಕೊಳ್ಳೇಗಾಲಕ್ಕೆ ಆಗಮಿಸಿದ್ದ ಡಿಸಿಎಂ ಡಾ.ಜಿ.ಪರಮೇಶ್ವರ ಅವರಿಗೆ ರೈತ ಸಂಘದ ಜಿಲ್ಲಾಧ್ಯಕ್ಷ ಗೌಡೇಗೌಡ ಮನವಿ ಸಲ್ಲಿಸಿ ರೈತರ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
- ರೈತ ಸಂಘದ ಜಿಲ್ಲಾಧ್ಯಕ್ಷ ಗೌಡೇಗೌಡ ಮನವಿ
ಕೊಳ್ಳೇಗಾಲ: ಕೊಳ್ಳೇಗಾಲಕ್ಕೆ ಬುಧವಾರ ಆಗಮಿಸಿದ್ದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗೆ ಕೊಳ್ಳೇಗಾಲ ತಾಲೂಕು ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ರೈತ ಸಂಘದ ಜಿಲ್ಲಾಧ್ಯಕ್ಷ ಗೌಡೇಗೌಡ ಹಾಗೂ ರೈತ ಮುಖಂಡರು ಮನವಿ ಸಲ್ಲಿಸಿದರು.
ಸರ್ಕಾರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಇಲ್ಲಿ ತೋಟಗಾರಿಗೆ ಬೆಳೆ ಹೆಚ್ಚಿದ್ದು, ವೈಜ್ಞಾನಿಕ ಪರಿಹಾರ ನೀಡಬೇಕು. ಕೃಷಿ ಬೆಳೆಗಳಾದ ಕಬ್ಬು, ಭತ್ತ, ಮುಸುಕಿನ ಜೋಳ, ರಾಗಿ ಹಾಗೂ ಇನ್ನಿತರ ಬೆಳೆಗಳು ಹಾಗೂ ಅಂತರ್ಜಲ ಆಶ್ರಿತ ಬೆಳೆಗಳು ಒಣಗಿ ಹೋಗಿದ್ದು, ಎಕರೆಗೆ 30 ಸಾವಿರ ರೂ.ಪರಿಹಾರ ನೀಡಬೇಕು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಮೇವು ಬ್ಯಾಂಕ್ ತೆರೆಯಬೇಕು. ನೀರಾವರಿ ಕಾಲುವೆಗಳನ್ನು ಅವಲಂಬಿಸಿರುವ ವ್ಯವಸಾಯ ನೀರನ್ನು ತಮಿಳುನಾಡಿಗೆ ಹರಿಸಿ ಖಾಲಿ ಮಾಡಿದ್ದು, ಇಲ್ಲಿನ ರೈತರು ಬೆಳೆ ಬೆಳೆಯದೆ ಸಂಕಷ್ಟಕ್ಕೀಡಾದ್ದು, ರೈತರ ಜೀವನವು ಕಷ್ಟದಲ್ಲಿದೆ. ಆದ್ದರಿಂದ ಇನ್ನು ಮುಂದೆ ಕಾಲುವೆಗಳಲ್ಲಿ ಉಳಿದಿರುವ ಅವಧಿಗೆ ಕಬಿನಿ ನೀರನ್ನು ಕೊಳ್ಳೇಗಾಲ ತಾಲೂಕಿನಲ್ಲಿ ಹರಿಸಬೇಕು ಸೇರಿದಂತೆ ಬೇಡಿಕೆ ಪತ್ರ ಸಲ್ಲಿಸಿದರು.