ಗುಂಡ್ಲುಪೇಟೆ ಪಟ್ಟಣದ ನಿರ್ಮಲ ಕಾನ್ವೆಂಟ್ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಸತೀಶ್ ಉದ್ಘಾಟಿಸಿದರು. ಸಿಸ್ಟರ್ ಆರೋಗ್ಯ ಮೇರಿ, ಸಿಸ್ಟರ್ ಕಾರ್ಮಿನ್ ಡಿಸೋಜಾ, ಕ್ರಾಸ್ತಾ, ಲೀನಾ ಡಿಸೋಜಾ ಆರೋಗ್ಯ ಮೇರಿ, ಸಿಸ್ಟರ್ಸ್ ಮೋತಿ, ಫಿಲೋಮಿನಾ, ಸಂತೋಷ್, ಒಲಿವಿಯ, ರೀಟಾ, ಜುವಾನ ಶಿಕ್ಷಕರಾದ ವೆರೋನಿಕ, ನಿರ್ಮಲ ಆಂಜನೇಯ, ರುದ್ರಪ್ಪ, ಮಲ್ಲಪ್ಪ ಇದ್ದರು.
ಗುಂಡ್ಲುಪೇಟೆ: ಶಾಲೆಯ 50 ವರ್ಷಗಳ ಇತಿಹಾಸವನ್ನು ಸ್ಮರಿಸುವ ಸುವರ್ಣ ಮಹೋತ್ಸವ ಲಾಂಛನ ಅಡಿಯಲ್ಲಿ ನಡೆದ ಈ ಕಾರ್ಯಕ್ರಮ ಹಳೆಯ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ ಎಂದು ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಕೆ.ಸಿ.ಸತೀಶ್ ಅಭಿಪ್ರಾಯಪಟ್ಟರು.
ಪಟ್ಟಣದ ನಿರ್ಮಲ ಕಾನ್ವೆಂಟ್ ಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸದ್ಯ ನಾನಾ ಕಡೆಗಳಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಹಾಜರಾಗಿ ತಮ್ಮ ಹಳೆಯ ಸಹಪಾಠಿಗಳನ್ನು ಭೇಟಿ ಮಾಡಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಜತೆಗೆ ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸುವ ಮೂಲಕ ಮೌಲ್ಯಗಳನ್ನು ಅನುಸರಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿವಿಧ ವರ್ಷಗಳ ಬ್ಯಾಚ್‌ಗಳ ಪರಿಚಯದ ನಂತರ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರು ಹಾಗೂ ಹಿರಿಯ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು.
ಕಾರ್ಯಕ್ರಮದ ಮತ್ತೊಂದು ವಿಶೇಷತೆಯೆಂದರೆ 1985-86, 1987-88, 1999-2000 ಹಾಗೂ 2000-2001ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಬ್ಯಾಚ್‌ಗಳಿಂದ ಶಾಲೆಯ ಅಭಿವೃದ್ಧಿಗೆ ದೇಣಿಗೆ ಸಮರ್ಪಿಸಿದರು. ಸಂದರ್ಭದಲ್ಲಿ ನಿರ್ಮಲ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ, ನಿರ್ಮಲ ರೂಟ್ಸ್ ಆ್ಯಂಡ್ ವಿಂಗ್ಸ್ ಅನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.
ಮುಖ್ಯ ಶಿಕ್ಷಕಿಯರಾದ ಸಿಸ್ಟರ್ ಆರೋಗ್ಯ ಮೇರಿ, ಸಿಸ್ಟರ್ ಕಾರ್ಮಿನ್ ಡಿಸೋಜಾ, ಸಹ ಶಿಕ್ಷಕಿಯರಾದ ಕ್ರಾಸ್ತಾ, ಲೀನಾ ಡಿಸೋಜಾ ಆರೋಗ್ಯ ಮೇರಿ, ಸಿಸ್ಟರ್ಸ್ ಮೋತಿ, ಫಿಲೋಮಿನಾ, ಸಂತೋಷ್, ಒಲಿವಿಯ, ರೀಟಾ, ಜುವಾನ ಶಿಕ್ಷಕರಾದ ವೆರೋನಿಕ, ನಿರ್ಮಲಾ ಆಂಜನೇಯ, ರುದ್ರಪ್ಪ, ಮಲ್ಲಪ್ಪ, ಇತರರು ಇದ್ದರು.