ಹುಲಿಗಳ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಸಾಕಾನೆಗಳು 
ಚಾಮರಾಜನಗರ

ಹುಲಿ ಸೆರೆಗೆ ನಾಲ್ಕು ತಂಡಗಳ ರಚನೆ

ಪ್ರಮುಖ ಮುಖ್ಯಾಂಶಗಳು

  • ನಂಜದೇವನಪುರದ ಬಳಿ ಕಾಣಿಸಿಕೊಂಡಿರುವ ಐದು ಹುಲಿಗಳು
  • ವ್ಯಾಘ್ರಗಳ ಸೆರೆಗೆ ಮುಂದುವರೆದ ಕಾರ್ಯಾಚರಣೆ
  • ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಕೂಂಬಿಂಗ್
ಚಾಮರಾಜನಗರ: ತಾಲೂಕಿನ ನಂಜದೇವನಪುರ ಮತ್ತು ಸುತ್ತಮುತ್ತಿನ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಐದು ಹುಲಿಗಳ ಸೆರೆಗೆ ಅರಣ್ಯ ಇಲಾಖೆಯಿಂದ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ.
ವಿಭಾಗದ ಬೇರೆ ಬೇರೆ ವಲಯಗಳಿಂದ ಅರಣ್ಯ ಸಿಬ್ಬಂದಿಗಳನ್ನು ಕರೆಸಿಕೊಂಡು ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ. ಒಂದು ತುಮಕೂರು ಕೇಜ್ ಮತ್ತು ಹುಲಿ ಬೋನುಗಳನ್ನಿಟ್ಟು ಸಿಬ್ಬಂದಿಗಳ ನಾಲ್ಕು ತಂಡಗಳನ್ನು ರಚಿಸಿ ಪ್ರತೀ ತಂಡಕ್ಕೆ, ಒಂದು ಡ್ರೋನ್ ವಿತರಿಸಿ ಹುಲಿ ಕಂಡುಬಂದ ಪ್ರದೇಶದ ಸುತ್ತಮುತ್ತಲೂ ನಿಗಾವಹಿಸಲಾಗಿದೆ. 2 ಸಾಕಾನೆಗಳನ್ನು ತಂದು ಕಾರ್ಯಾಚರಣೆಗೆ ಬಳಸಿಕೊಡಲಾಗಿದೆ. ರಾತ್ರಿ ವೇಳೆಯಲ್ಲಿ ಥರ್ಮಲ್ ಡ್ರೋನ್ ಮೂಲಕ ಹುಲಿಗಳ ಚಲನವಲನಗಳ ಮೇಲೆ ನಿಗಾವಹಿಸಿ ಸದರಿ ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಯಿತು.