ಮಲೆಮಹದೇಶ್ವರ ಬೆಟ್ಟದಲ್ಲಿ ಗಿಳಿಗಳನ್ನು ಸಂಗ್ರಹಿಸಿದ್ದ ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದರು.
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶನಿವಾರ ಶಾಸ್ತ್ರ ಹೇಳುವ ನೆಪದಲ್ಲಿ ಗಿಳಿಗಳನ್ನು ಅಕ್ರಮವಾಗಿ ಪಂಜರದಲ್ಲಿ ಬಂಧಿಸಿದ್ದ ನಾಲ್ವರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂ ಗಣೇಶ್, ವಿಕ್ರಮ್, ಸರಿಯಾಜಿ ಹಾಗೂ ಗುರುಸ್ವಾಮಿ ಬಂಧಿತರು. ಗಣೇಶ್ ಹಾಗೂ ವಿಕ್ರಮ್ ಅವರು ಮ.ಬೆಟ್ಟದ ನಾಗಮಲೆ ಭವನ ಸಮೀಪದ ಸಾರ್ವಜನಿಕರು ತಿರುಗಾಡುವ ಸ್ಥಳದಲ್ಲಿ ಹಾಗೂ ಇನ್ನಿಬ್ಬರು ಲಾಡು ತಯಾರಿಕ ಘಟಕದ ಸಮೀಪದಲ್ಲಿ ಗಿಳಿಗಳನ್ನು ಇರಿಸಿಕೊಂಡು ಶಾಸ್ತ್ರ ಹೇಳುತ್ತಾ ಕುಳಿತ್ತಿದ್ದರು. ಈ ಬಗ್ಗೆ ಅರಣ್ಯ ಸಂಚಾರಿ ದಳದ ಪೊಲೀಸರು ಇವರನ್ನು ವಿಚಾರಿಸಿದಾಗ ಗಿಳಿಗಳನ್ನು ಅಕ್ರಮವಾಗಿ ಸಂಗ್ರಹಿಸಿರುವುದು ದೃಢಪಟ್ಟಿದೆ. ಬಳಿಕ 8 ಗಿಳಿಗಳನ್ನು ವಶಕ್ಕೆ ಪಡೆದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.