ಚಾಮರಾಜನಗರದ ಕೋಡಿಮೋಳೆ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿ ಪೂಜೆ ನೆರವೇರಿಸಿದರು. ಮಹಮ್ಮದ್ ಅಸ್ಗರ್ ಮುನ್ನ, ಸಯ್ಯದ್ ಮುಸಾಯಿಲ್, ಮರಿಸ್ವಾಮಿ, ಪುಟ್ಟಸ್ವಾಮಿ ದ್ವಾರಕಿ ಇತರರು ಇದ್ದರು.
- ಚುಡಾ ಅನುದಾನದ ಕಾಮಗಾರಿಗೆ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ
- 4 ಕೋಟಿ 25 ಲಕ್ಷ ರೂ. ವೆಚ್ಚದ ಕೆರೆ ಅಭಿವದ್ಧಿ ಕಾಮಗಾರಿಗೆ ಶಂಕುಸ್ಥಾಪನೆ
ಚಾಮರಾಜನಗರ: ಚಾಮರಾಜನಗರ ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಕೋಡಿಮೋಳೆ ಕೆರೆ ಅಭಿವದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ನಗರದ ಹೊರವಲಯದಲ್ಲಿರುವ ಕೋಡಿಮೋಳೆ ಕೆರೆ ಆವರಣದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು 4 ಕೋಟಿ 25 ಲಕ್ಷ ರೂ. ವೆಚ್ಚದ ಕೆರೆ ಅಭಿವದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ವಾಡಿದರು. ಇದೇ ವೇಳೆ ವಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಪ್ರಾಧಿಕಾರದ ವತಿಯಿಂದ 3 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಕೋಡಿಮೋಳೆ ಕೆರೆ ಹಾಗೂ 60 ಲಕ್ಷ ರೂ. ವೆಚ್ಚದಲ್ಲಿ ಸೋಮವಾರಪೇಟೆಯ ಬಳಿ ಕಟ್ಟೆ ಅಭಿವದ್ಧಿ ಕಾಮಗಾರಿ ವಾಡಲಾಗುತ್ತಿದೆ. ಕೋಡಿಮೋಳೆ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಾಕಿಂಗ್ ಪಾತ್, ವಿದ್ಯುತ್ ದೀಪ, ಪಾರ್ಕಿಂಗ್ ಜನರು ಕುಳಿತುಕೊಳ್ಳಲು ಕಲ್ಲುಬೆಂಚುಗಳ ವ್ಯವಸ್ಥೆ, ರಸ್ತೆ ಅಭಿವದ್ಧಿಯೂ ಸೇರಿವೆ ಎಂದರು.
ಸೋಮವಾರಪೇಟೆಯಿಂದ ಭುವನೇಶ್ವರಿ ವೃತ್ತ ಹಾಗೂ ಭುವನೇಶ್ವರಿ ವತ್ತದಿಂದ ಜಾಲಹಳ್ಳಿ ಹುಂಡಿವರೆಗೆ ವಿದ್ಯುತ್ ಬೀದಿದೀಪಗಳನ್ನು 80 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗುತ್ತಿದೆ. ಪಟ್ಟಣದ ಅಭಿವೃದ್ಧಿಗಾಗಿ ನೂರಾರು ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಗರಾಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ವಾತನಾಡಿ, ಪ್ರಾಧಿಕಾರವನ್ನು ಚಾಮರಾಜನಗರದಲ್ಲಿ ಅಪ್‌ಗ್ರೇಡ್‌ಗೊಳಿಸಲಾಯಿತು. 2011-12ನೇ ಸಾಲಿನಲ್ಲಿ ಕೆರೆ ಅಭಿವೃದ್ಧಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿತ್ತು. ಅಂದಿನಿಂದ ಈವರೆಗೆ ಬಿಡುಗಡೆಯಾದ ಅನುದಾನವನ್ನು ಕ್ರೋಢಿಕರಿಸಿ ಶಾಸಕರ ವಾರ್ಗದರ್ಶನದಲ್ಲಿ ಕೋಡಿಮೋಳೆ ಕೆರೆ ಹಾಗೂ ಸೋಮವಾರಪೇಟೆಯ ಬಳಿ ಇರುವ ಕಟ್ಟೆ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಕಾಮಗಾರಿಗೆ ಸರ್ಕಾರದ ಅನುಮೋದನೆಯು ದೊರೆತಿದೆ ಎಂದರು.
ಮುಂಬರುವ ದಿನಗಳಲ್ಲಿ ಪಟ್ಟಣದಲ್ಲಿ 50:50ರ ಅನುಪಾತದಲ್ಲಿ ಲೇಔಟ್ ನಿರ್ಮಿಸಲಾಗುತ್ತಿದ್ದು, ಇದಕ್ಕಾಗಿ 14 ಕೋಟಿ 34 ಲಕ್ಷ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಕೋಡಿಮೋಳೆ ಕೆರೆ ಕಾಮಗಾರಿಯಲ್ಲಿ ಜನರಿಗೆ ವಾಯುವಿಹಾರಕ್ಕೆ ಅನುಕೂಲವಾಗುವಂತೆ ವಾಕಿಂಗ್ ಪಾತ್, ಕೆರೆಯ ಸುತ್ತಲು ಗಿಡಗಳನ್ನು ಬೆಳೆಸಲಾಗುತ್ತದೆ. ವಿದ್ಯುತ್ ದೀಪ ಅಳವಡಿಸಲಾಗುತ್ತದೆ. ಪ್ರವಾಸೋದ್ಯಮ ಇಲಾಖೆಯಿಂದ ದೋಣಿವಿಹಾರಕ್ಕೂ ಅನುಕೂಲ ಕಲ್ಪಿಸಲಾಗುತ್ತದೆ. ಕೋಡಿಮೋಳೆ ಕೆರೆ ಅಭಿವದ್ಧಿಪಡಿಸಿ ನಿರ್ವಹಣೆಗಾಗಿ ಸಂಬಂಧಪಟ್ಟ ಪಂಚಾಯಿತಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕೆ.ಡಿ.ಪಿ. ಅಧಿಕಾರೇತರ ಸದಸ್ಯ ಸಯ್ಯದ್ ಮುಸಾಯಿಲ್, ತಾಲೂಕು ಪಂಚಾಯಿತಿ ಕೆ.ಡಿ.ಪಿ ಸದಸ್ಯ ಶ್ರೀನಿವಾಸ್, ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮರಿಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪುಟ್ಟಸ್ವಾಮಿ ದ್ವಾರಕಿ, ರಾಜು, ಕನಿಷ್ಠ ವೇತನ ಸಲಹಾ ಮಂಡಳಿ ವಾಜಿ ಅಧ್ಯಕ್ಷರಾದ ಉಮೇಶ್, ನಗರಾಭಿವದ್ಧಿ ಪ್ರಾಧಿಕಾರದ ಆಯುಕ್ತರಾದ ಸೀವಾ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಮಂಜುಳ, ಮುಖಂಡರಾದ ಕೋಡಿಮೋಳೆ ಗೋವಿಂದಶೆಟ್ಟಿ, ಪ್ರಕಾಶ್, ರಮೇಶ್, ನಟರಾಜು, ಸ್ವಾಮಿ, ಇತರರು ಇದ್ದರು.
ವಿದ್ಯುತ್ ಚಿತಾಗಾರಕ್ಕೆ ಗುದ್ದಲಿಪೂಜೆ:
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಮ್ಸ್) ಹಿಂಭಾಗದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ವಾಣಕ್ಕೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಗುದ್ದಲಿಪೂಜೆ ನೆರೆವೇರಿಸಿದರು. ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭೆ ಪೌರಾಯುಕ್ತ ಪರಶುರಾಮ ಛಲವಾದಿ, ಕಿರಿಯ ಎಂಜಿನಿಯರ್ ಗಿರೀಶ್ ಆರಾದ್ಯ, ನಗರಸಭೆ ವಾಜಿ ಅಧ್ಯಕ್ಷ ರಾಜಪ್ಪ ಮತ್ತು ಮುಖಂಡರು ಇದ್ದರು.